Power supply will be disrupted on January 13, 2026, from 10 AM to 6 PM in humcha GP areas due to maintenance work at the Konandur 110/11 KV substation.
ಹುಂಚ ಗ್ರಾಪಂ ವ್ಯಾಪ್ತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ಕೋಣಂದೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ, ದಿನಾಂಕ 13-01-2026 (ಮಂಗಳವಾರ) ರಂದು ಕೋಣಂದೂರು ಶಾಖಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಕೋಣಂದೂರು, ಗುಡ್ಡೆಕೊಪ್ಪ, ದೇಮ್ಲಾಪುರ, ಹುಂಚ, ತ್ರಿಯಂಬಕಪುರ ಹಾಗೂ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ನಿರ್ವಹಣಾ ಕಾಮಗಾರಿ ಕಾರಣದಿಂದ ಉಂಟಾಗುವ ಈ ವಿದ್ಯುತ್ ವ್ಯತ್ಯಯಕ್ಕೆ ಗ್ರಾಹಕರು ಸಹಕರಿಸಬೇಕೆಂದು ವಿದ್ಯುತ್ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

