w
Headlines
Home » ಅಪ್ರಾಪ್ತ ಬಾಲಕಿಯ ಮೇಲೆ 70 ವರ್ಷದ ವೃದ್ದನಿಂದ ಅತ್ಯಾಚಾರ – ಆರೋಪಿ ಬಂಧನ

ಅಪ್ರಾಪ್ತ ಬಾಲಕಿಯ ಮೇಲೆ 70 ವರ್ಷದ ವೃದ್ದನಿಂದ ಅತ್ಯಾಚಾರ – ಆರೋಪಿ ಬಂಧನ

ಅಪ್ರಾಪ್ತ ಬಾಲಕಿಯ ಮೇಲೆ 70 ವರ್ಷದ ವೃದ್ದನಿಂದ ಅತ್ಯಾಚಾರ – ಆರೋಪಿ ಬಂಧನ
ಅಪ್ರಾಪ್ತ ಬಾಲಕಿಯ ಮೇಲೆ ವೃದ್ದನೊಬ್ಬ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಳೆಹೊನ್ನೂರು ವ್ಯಾಪ್ತಿಯ ಕೂಡ್ಲಿ ಗ್ರಾಮದ 76 ವರ್ಷ ವಯಸ್ಸಿನ ವ್ಯಕ್ತಿಯೋರ್ವ ,10 ವರ್ಷ ವಯಸ್ಸಿನ ಬಾಲಕಿಯನ್ನು ಚಾಕಲೇಟ್ ಕೊಡಿಸುವುದಾಗಿ ಹೇಳಿ ಕರೆದಿದ್ದಾನೆ. ಬಳಿಕ ಹೊಳೆ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.  

ಇನ್ನೂ ಈ ಘಟನೆ ನಂತರ ಮನೆಗೆ ಬಂದ ಬಾಲಕಿ ತನಗಾಗುತ್ತಿರುವ ನೋವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಅಲ್ಲದೇ ಬಾಲಕಿಗೆ ರಕ್ತಸ್ರಾವ ಆಗಿದ್ದು, ಪೋಷಕರು ಗಾಬರಿಗೊಂಡಿದ್ದಾರೆ. 

ಈ ವೇಳೆ ವಿಚಾರಿಸಿದಾಗ ಮಗು ನಡೆದ ಘಟನೆ ಬಗ್ಗೆ ಹೇಳಿದೆ. ತಕ್ಷಣ ಪೋಷಕರು ಹೊಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿ ಪೊಕ್ಸೋ ಕೇಸ್​ನಡಿಯಲ್ಲಿ ಜೈಲಿಗೆ ತಳ್ಳಿದ್ದಾರೆ. 

 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.