w
Headlines
Home » ಮಹಿಳಾ ಸಹೋದ್ಯೋಗಿನಿ ಮೇಲೆ ಬ್ಯಾಂಕ್ ಅಧಿಕಾರಿಯ ಅಸಭ್ಯ ವರ್ತನೆ – ಪ್ರಕರಣ ದಾಖಲು

ಮಹಿಳಾ ಸಹೋದ್ಯೋಗಿನಿ ಮೇಲೆ ಬ್ಯಾಂಕ್ ಅಧಿಕಾರಿಯ ಅಸಭ್ಯ ವರ್ತನೆ – ಪ್ರಕರಣ ದಾಖಲು

Vijaykarnataka (1)

ಮಹಿಳಾ ಸಹೋದ್ಯೋಗಿನಿ ಮೇಲೆ ಬ್ಯಾಂಕ್ ಅಧಿಕಾರಿಯ ಅಸಭ್ಯ ವರ್ತನೆ – ಪ್ರಕರಣ ದಾಖಲು

ಶಿವಮೊಗ್ಗ : ಬ್ಯಾಂಕಿನ ಮಹಿಳಾ ಸಿಬ್ಬಂದಿಯೊಬ್ಬರು ಅದೇ ಬ್ಯಾಂಕಿನ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣವನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆ ವರ್ಗಾಯಿಸಲಾಗಿದೆ.

ಬ್ಯಾಂಕ್‌ ಒಂದರ ಶಿವಮೊಗ್ಗ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಚೇರಿ ಕೆಲಸಕ್ಕೆ ಒಬ್ಬರನ್ನೇ ಕರೆಯುವುದು, ಮೈ ಸವರುವುದನ್ನು ಮಾಡಿದ್ದರು ಎಂದು ಆರೋಪಿಸಲಾಗಿದೆ.

ಬ್ಯಾಂಕಿನ ವ್ಯವಹಾರ ಸಂಬಂಧ ಮೀಟಿಂಗ್ ಎಂದು ಶಿವಮೊಗ್ಗದ ಹೊಟೇಲ್ ಒಂದಕ್ಕೆ ಕರೆಯಿಸಿಕೊಂಡು ದೇಹ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದೇ ರೀತಿ ಮೂರು ಬಾರಿ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು, ಮತ್ತೊಬ್ಬ ಸಿಬ್ಬಂದಿ ಜೊತೆಗೆ ಸಂಬಂಧ ಕಟ್ಟಿ ಬ್ಯಾಂಕಿನ ಉಳಿದ ಕೆಲವು ಸಿಬ್ಬಂದಿ ತನ್ನ ಮಾನಕ್ಕೆ ಕುಂದುಂಟು ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ದೊಡ್ಡಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.