Headlines

ರಿಪ್ಪನ್ ಪೇಟೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಜಾರಿಗೆ ವಿಶೇಷ ದಾಳಿ – 40 ಪ್ರಕರಣ ದಾಖಲು

ರಿಪ್ಪನ್ ಪೇಟೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಜಾರಿಗೆ ವಿಶೇಷ ದಾಳಿ – 40 ಪ್ರಕರಣ ದಾಖಲು

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ತಂಬಾಕು ನಿಯಂತ್ರಣ ಕಾಯ್ದೆ (COTPA) ಉಲ್ಲಂಘನೆ ವಿರುದ್ಧ ಆರೋಗ್ಯ ಇಲಾಖೆ ವತಿಯಿಂದ ವಿಶೇಷ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಒಟ್ಟು 40 ಪ್ರಕರಣಗಳನ್ನು ದಾಖಲಿಸಿ, ₹5000 ದಂಡವನ್ನು ಸಂಗ್ರಹಿಸಲಾಯಿತು.

ಈ ದಾಳಿ ಕಾರ್ಯಾಚರಣೆಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್ ನೇತೃತ್ವ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಹೇಮಂತ್ ರಾಜ್ ಅರಸ್ ಕೆ.ಎಂ , ಸಾಮಾಜಿಕ ಕಾರ್ಯಕರ್ತ  ರವಿರಾಜ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಣಿ ಕರಿಬಸಮ್ಮ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಧುಸೂದನ್ ಹಾಗೂ ಯಜುರ್ವೇದ, ಕಿರಿಯ ಆರೋಗ್ಯ ನಿರೀಕ್ಷಕರಾದ ಅಮೃತೇಶ್ ಮತ್ತು ರಾಘವೇಂದ್ರ ಹಾಗೂ ಉಪ ಪೊಲೀಸ್ ನಿರೀಕ್ಷಕ ವಿನೋದ್ ಕುಮಾರ್ ರವರು ಈ ತಂಡದಲ್ಲಿ ಭಾಗಿಯಾಗಿದ್ದರು.

ದಾಳಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು, ಅದರ ಸಾಮಾಜಿಕ ದುಷ್ಪರಿಣಾಮಗಳು ಹಾಗೂ COTPA ಕಾಯ್ದೆಯ ಕುರಿತು ಅರಿವು ಮೂಡಿಸಲಾಯಿತು.

ಆರೋಗ್ಯ ಇಲಾಖೆ ವತಿಯಿಂದ ಈ ರೀತಿಯ ಕಾನೂನು ಜಾಗೃತಿ ಮತ್ತು ದಾಳಿಗಳು ಮುಂದುವರೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.