January 11, 2026

ಶಿಕಾರಿಪುರ ಆಸ್ಪತ್ರೆಯಲ್ಲಿ ಚೂರಿ ಇರಿತ – ಮೂವರಿಗೆ ಗಾಯ, ಪ್ರಕರಣ ದಾಖಲು

ಶಿಕಾರಿಪುರ ಆಸ್ಪತ್ರೆಯಲ್ಲಿ ಚೂರಿ ಇರಿತ – ಮೂವರಿಗೆ ಗಾಯ, ಪ್ರಕರಣ ದಾಖಲು

ಶಿವಮೊಗ್ಗ: ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮೂವರ ಮೇಲೆ ನಡೆದ ಚೂರಿ ದಾಳಿಯ ಪ್ರಕರಣದಲ್ಲಿ ಶಿಕಾರಿಪುರ ಟೌನ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮುನ್ನಡೆದ ಜಗಳ ಸಂಬಂಧ ಇಬ್ಬರು ಪಕ್ಷಗಳು ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಮಧ್ಯೆ ಊರಿನ ಕೆಲವರು ಸಮಸ್ಯೆ ಬಗೆಹರಿಸಲು ಆಸ್ಪತ್ರೆಗೂ ಆಗಮಿಸಿದ್ದರು. ಆದರೆ ಪರಿಸ್ಥಿತಿ ಶಾಂತಗೊಳ್ಳುವ ಬದಲು ಅಹಿತಕರ ತಿರುವು ಪಡೆದುಕೊಂಡಿತು.

ಅದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭರತ್, ವೀರೇಶ್ ಹಾಗೂ ಸೋಮಶೇಖರ್ ಮೇಲೆ ದಾಳಿ ನಡೆದಿದೆ. ಆರೋಪಿಗಳು ಚಾಕುವಿನಿಂದ ಕುತ್ತಿಗೆ ಮತ್ತು ಎದೆ ಭಾಗಕ್ಕೆ ಇರಿದು ಮೂವರಿಗೂ ಗಾಯಗಳಾಗಿವೆ.

ಘಟನೆ ಸಂದರ್ಭ ಕೆಲಕಾಲ ಆಸ್ಪತ್ರೆಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.ದಾಳಿಯ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಕೊಲೆಯತ್ನದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನಾ ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

About The Author