January 11, 2026

ರಿಪ್ಪನ್‌ಪೇಟೆಯಲ್ಲಿ 58ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ

ರಿಪ್ಪನ್‌ಪೇಟೆಯಲ್ಲಿ 58ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ

ರಿಪ್ಪನ್‌ಪೇಟೆ : ಸ್ಥಳೀಯ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 58ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಮೆರವಣಿಗೆ ಪಟ್ಟಣದಲ್ಲಿ ಭವ್ಯವಾಗಿ ಜರುಗಿತು. ವಿನಾಯಕ ವೃತ್ತದಲ್ಲಿ ಹಿಂದೂ ಧ್ವಜಾರೋಹಣ ನೆರವೇರಿಸಿದ ನಂತರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ 11 ದಿನಗಳ ಗಣಪತಿ ಪ್ರತಿಷ್ಠಾಪನಾ ಪೂಜೆ ಭಕ್ತಿಭಾವದಿಂದ ಆರಂಭವಾಯಿತು.

ವಿನಾಯಕ ವೃತ್ತದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಸಿದ್ದಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅರ್.ಈಶ್ವರಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಹಾಗೂ ಸಮಿತಿಯ ಅಧ್ಯಕ್ಷ ಸುಧೀರ್ ಪಿ. ನೆರವೇರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಮುಖಂಡರಾದ ಎಂ.ಬಿ. ಮಂಜುನಾಥ, ಎಂ. ಸುರೇಶಸಿಂಗ್, ಆರ್. ರಾಘವೇಂದ್ರ, ಕಾರ್ಯದರ್ಶಿ ಮುರುಳಿಧರ, ಲಕ್ಷ್ಮಣ ಆಟೋ, ರಾಮಚಂದ್ರ ಬಳೆಗಾರ್, ಶ್ರೀನಿವಾಸ ಆಚಾರ್, ಜಯಲಕ್ಷ್ಮಿ, ವೀರಭದ್ರಪ್ಪ, ನಾಗರಾಜ ಪವಾರ್, ರಾಘವೇಂದ್ರ, ಶ್ರೀಧರ, ವೈ.ಜೆ. ಕೃಷ್ಣ, ಸಂತೋಷ, ನವೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಗಣಪತಿ ಹಬ್ಬದ ಅಂಗವಾಗಿ ಮುಂದಿನ 11 ದಿನಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

About The Author