ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ
Retired government employees were specially honoured by senior citizens at Spandana Old Age Home in Guddadachannapur village of Shiggaon taluk, Haveri district.
ಬಂಕಾಪುರ: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗುಡ್ಡದಚನ್ನಾಪುರ ಗ್ರಾಮದಲ್ಲಿರುವ ಸ್ಪಂದನಾ ವೃದ್ಧಾಶ್ರಮದಲ್ಲಿ ನಿವೃತ್ತ ಸರ್ಕಾರಿ ನೌಕರರನ್ನು ಹಿರಿಯ ನಾಗರಿಕರಿಂದ ವಿಶೇಷವಾಗಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪಿಎಸ್‌ಐ ಆಗಿ ನಿವೃತ್ತರಾದ ಪರಶುರಾಮ ನಿರೋಳ್ಳಿ ಮಾತನಾಡಿ, ಅಧಿಕಾರವು ಸಮಾಜದಲ್ಲಿನ ಓರೆ-ಕೋರೆಗಳನ್ನು ತಿದ್ದುವ ಜವಾಬ್ದಾರಿಯುತ ಸಾಧನವಾಗಿದೆ. ಯುವಕರು ದುಶ್ಚಟಗಳಿಗೆ ಒಳಗಾಗದೆ ನ್ಯಾಯಯುತವಾಗಿ ಸಮಾಜಸೇವೆ ಮಾಡಬೇಕು. ಸಮಾಜದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ತೊಂದರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತರಾದ ಆರ್.ಎಚ್. ರೊಡ್ಡಣ್ಣವರ ಹಾಗೂ ಪೌರಕಾರ್ಮಿಕರಾಗಿ ನಿವೃತ್ತರಾದ ನಿಂಗಪ್ಪ ಹೊಸಮನಿ ಅವರು ಕೂಡ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸನ್ಮಾನ ಕಾರ್ಯಕ್ರಮದಲ್ಲಿ ಸ್ಪಂದನಾ ವೃದ್ಧಾಶ್ರಮದ ಅಧ್ಯಕ್ಷ ಮಹಾಬಲೇಶ ಹೋನಕೇರಿ, ಹೊನ್ನಪ್ಪ ಹೂಗಾರ, ಹಾವೇರಿ ಜಿಲ್ಲಾ ಇಂಟೆಲಿಜೆನ್ಸ್ ವಿಭಾಗದ ಪಿಎಸ್‌ಐ ಡಿ.ಎನ್. ಕುಡಲ್, ಸೋಮಶೇಖರ ಗೌರಿಮಠ, ಷಣ್ಮುಕಪ್ಪ ಕಲಣ್ಣವರ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಚಂದ್ರು ಮಾಯಣ್ಣವರ, ಶಿವಾನಂದ ಗುಡ್ಡನವರ, ಅಶೋಕ್ ಶೆಟ್ಟರ್ ಹಾಗೂ ಮದು ಜಂಗಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿರಿಯ ನಾಗರಿಕರು ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಿ ಗೌರವಿಸಿದರು.
ವರದಿ: ನಿಂಗರಾಜ್ ಕುಡಲ್, ಹಾವೇರಿ ಜಿಲ್ಲೆ – ಬಂಕಾಪುರ