Headlines

ಕೋಡೂರಿನ ಬಾಣಂತಿ ಸುಮಾ ಸಾವು ಪ್ರಕರಣ: ಈ ಬಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದೇನು!?

Screenshot 2026 07 11 15 14 41 614 com.picsart.studio edit

ಕೋಡೂರಿನ ಬಾಣಂತಿ ಸುಮಾ ಸಾವು ಪ್ರಕರಣ: ಈ ಬಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದೇನು!?

Health Minister U.T. Khader has ordered a high-level inquiry into the death of postpartum woman Suma from Koduru near Thirthahalli. The investigation will examine alleged lapses in treatment and why the patient was referred to Manipal despite advanced medical facilities in Shivamogga.

ಶಿವಮೊಗ್ಗ (ರಿಪ್ಪನ್‌ಪೇಟೆ): ತೀರ್ಥಹಳ್ಳಿಯ ಬಾಣಂತಿ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ (DC) ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

​ತೀವ್ರ ರಕ್ತಸ್ರಾವದಿಂದ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಖವಳ್ಳಿ ಗ್ರಾಮದ ಬಾಣಂತಿ ಸುಮಾ ಸಾವನ್ನಪ್ಪಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಶಿವಮೊಗ್ಗದಲ್ಲಿ ಎಲ್ಲಾ ಸೌಲಭ್ಯಗಳಿರುವ ಸುಸಜ್ಜಿತ ಮೆಡಿಕಲ್ ಕಾಲೇಜು (ಮೆಗ್ಗಾನ್) ಇದ್ದರೂ, ರೋಗಿಯನ್ನು ಮಣಿಪಾಲ್ ಆಸ್ಪತ್ರೆಗೆ ಏಕೆ ಕಳುಹಿಸಲಾಯಿತು ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಈ ಬಗ್ಗೆ ಕೇವಲ ಸ್ಥಳೀಯ ತನಿಖೆ ಮಾತ್ರವಲ್ಲದೆ, ಉನ್ನತ ಮಟ್ಟದ ಅಧಿಕಾರಿಗಳಿಂದಲೂ ತನಿಖೆ ಮಾಡಿಸಲಾಗುವುದು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರೊಂದಿಗೂ ಚರ್ಚಿಸುತ್ತೇನೆ ಎಂದರು.

​ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಯಲ್ಲಿ ಲೋಪದೋಷಗಳಿವೆಯೇ ಅಥವಾ ಇಲ್ಲವೇ ಎಂಬುದು ತನಿಖೆಯ ನಂತರವೇ ಹೊರಬರಲಿದೆ. ಹೆರಿಗೆ ಎಂಬುದು ಯಾವುದೇ ರೋಗವಲ್ಲ , ತೀರ್ಥಹಳ್ಳಿ ಮತ್ತು ಶಿವಮೊಗ್ಗದಲ್ಲಿ ಸುಸಜ್ಜಿತ ಆಸ್ಪತ್ರೆಗಳಿದ್ದರೂ ಸಾವು ಸಂಭವಿಸಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಕೇವಲ ಅಧಿಕಾರಿಗಳು ನೀಡುವ ಮಾಹಿತಿಯನ್ನು ನಾನು ನಂಬುವುದಿಲ್ಲ, ವಾಸ್ತವ ತಿಳಿಯಲು ಡಿಸಿ ತನಿಖೆಗೆ ಸೂಚಿಸಿದ್ದೇನೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.