Headlines

ತಂತಿ ಬೇಲಿ ಹಾರುವಾಗ ಬಿದ್ದು ಕಾಡೆಮ್ಮೆ ಸಾವು

GridArt 20260511

ತಂತಿ ಬೇಲಿ ಹಾರುವಾಗ ಬಿದ್ದು ಕಾಡೆಮ್ಮೆ ಸಾವು

An eight-year-old wild buffalo died after accidentally falling while trying to jump a wire fence at Tiralebailu village in Thirthahalli taluk of Shivamogga district.

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ತಿರಳೇಬೈಲು ಗ್ರಾಮದಲ್ಲಿ ತಂತಿ ಬೇಲಿ ಹಾರುವ ವೇಳೆ ಆಯತಪ್ಪಿ ಬಿದ್ದ ಕಾಡೆಮ್ಮೆಯೊಂದು ಮೃತಪಟ್ಟ ಘಟನೆ ನಡೆದಿದೆ.

ಸುಮಾರು ಎಂಟು ವರ್ಷದ ಕಾಡೆಮ್ಮೆ ಮೇವು ಅರಸಿ ರಾತ್ರಿ ವೇಳೆ ಅಡಿಕೆ ತೋಟದ ಸಮೀಪಕ್ಕೆ ಬಂದಿತ್ತು. ಬೆಳಗಿನ ಜಾವದವರೆಗೆ ತೋಟದಲ್ಲೇ ವಿಶ್ರಾಂತಿ ಪಡೆದಿದ್ದ ಕಾಡೆಮ್ಮೆ, ತೋಟದ ಮಾಲೀಕ ಬಂದಿರುವುದನ್ನು ಕಂಡು ಓಡಿ ಹೋಗಲು ಯತ್ನಿಸಿದೆ.

ಈ ವೇಳೆ ತೋಟದ ತಂತಿ ಬೇಲಿ ಹಾರುವಾಗ ಆಯತಪ್ಪಿ ಬಿದ್ದ ಪರಿಣಾಮ ಕಾಡೆಮ್ಮೆಯ ಹೊಟ್ಟೆ ಭಾಗದ ಸ್ನಾಯುಗಳಿಗೆ ಗಂಭೀರ ಗಾಯಗಳಾಗಿವೆ. ನೆಲಕ್ಕುರುಳಿದ ಕಾಡೆಮ್ಮೆ ಎದ್ದು ನಿಲ್ಲಲಾಗದೆ ನರಳಾಡುತ್ತಿತ್ತು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿ ಗಾಯಗೊಂಡಿದ್ದ ಕಾಡೆಮ್ಮೆಗೆ ಹುಲ್ಲು, ನೀರು ಹಾಗೂ ಆಹಾರ ನೀಡಿ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಕಾಡೆಮ್ಮೆ ಮೃತಪಟ್ಟಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.