w
Headlines
Home » ರಿಪ್ಪನ್ ಪೇಟೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ರಿಪ್ಪನ್ ಪೇಟೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

GridArt 20260528

ರಿಪ್ಪನ್ ಪೇಟೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Bakrid festival celebrated with devotion and harmony in Ripponpet, Galibail and nearby villages as Muslim community members offered special prayers at mosques and Eidgah grounds.

ರಿಪ್ಪನ್ ಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ ಹಾಗೂ ಮದೀನಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು.

ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫೀ ಮಾತನಾಡಿ, “ಪ್ರತಿಯೊಂದು ಧರ್ಮವನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಹೋದರತ್ವ ಹಾಗೂ ಸೌಹಾರ್ದತೆಯಿಂದ ಬದುಕುವುದು ಇಸ್ಲಾಂ ಧರ್ಮದ ಸಂದೇಶವಾಗಿದೆ. ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ” ಎಂದು ಹೇಳಿದರು.

ಪಟ್ಟಣದ ಜುಮ್ಮಾ ಮಸೀದಿಯಿಂದ ಮುಸ್ಲಿಂ ಬಾಂಧವರು ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ, ಕಾರ್ಯದರ್ಶಿ ಶೇಖಬ್ಬ, ಮುಖಂಡರಾದ ಆರ್.ಎ. ಚಾಬುಸಾಬ್, ಅಮೀರ್ ಹಂಜಾ, ಆಸೀಫ್ ಭಾಷಾಸಾಬ್, ಪತ್ರಕರ್ತ ರಫೀ ರಿಪ್ಪನ್ ಪೇಟೆ, ಮುಸ್ತಾಫ, ಫಾಜಿಲ್, ರೆಹಮಾನ್, ನದೀಮ್, ರಹೀಮ್ ಚಾಲಿ, ಫೈಜಲ್, ಸಲೀಂ, ಅಫ್ಜಲ್ ಬ್ಯಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಗಾಳಿಬೈಲಿನಲ್ಲಿ ಬಕ್ರೀದ್ ಪ್ರಾರ್ಥನೆ :

ರಿಪ್ಪನ್‌ಪೇಟೆ ಸಮೀಪದ ಗಾಳಿಬೈಲು ಗ್ರಾಮದ ಈದ್ಗಾ ಮೈದಾನದಲ್ಲಿಯೂ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಾಳಿಬೈಲ್ ಜುಮ್ಮಾ ಮಸೀದಿ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಷರೀಫ್ ಸಾಬ್, ಜಾವಿದ್ ಸಾಬ್, ಘನಿಸಾಬ್, ವಜೀರ್ ಸಾಬ್, ಉಬೇದುಲ್ಲಾ ಷರೀಫ್, ಸೈಫುಲ್ಲಾ, ಹಿದಾಯತ್, ಶಬ್ಬೀರ್ ಸಾಬ್, ಖಲೀಲ್ ಷರೀಫ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದೇ ವೇಳೆ ಹೊಸನಗರ, ಬಟ್ಟೆಮಲ್ಲಪ್ಪ, ಕೆಂಚನಾಲ, ಗರ್ತಿಕೆರೆ ಹಾಗೂ ಸುಣ್ಣದ ಬಸ್ತಿ ಗ್ರಾಮಗಳಲ್ಲಿಯೂ ಮುಸ್ಲಿಂ ಬಾಂಧವರು ಈದ್ಗಾ ಮೈದಾನಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬವನ್ನು ಆಚರಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.