w
Headlines
Home » ಆಶ್ರಯ ನಿವೇಶನ ಪ್ರದೇಶ ಒತ್ತುವರಿ ತೆರವಿಗೆ ಒತ್ತಾಯ: ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ

ಆಶ್ರಯ ನಿವೇಶನ ಪ್ರದೇಶ ಒತ್ತುವರಿ ತೆರವಿಗೆ ಒತ್ತಾಯ: ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ

GridArt 20260525

ಆಶ್ರಯ ನಿವೇಶನ ಪ್ರದೇಶ ಒತ್ತುವರಿ ತೆರವಿಗೆ ಒತ್ತಾಯ: ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ

Residents and beneficiaries urge authorities to clear encroachments on Ashraya housing land in Gavatooru village, Hosanagara, and develop basic infrastructure for 23 beneficiaries.

ರಿಪ್ಪನ್ ಪೇಟೆ : ಕೆರೆಹಳ್ಳಿ ಹೋಬಳಿ ಗವಟೂರು ಗ್ರಾಮದ ಸರ್ವೇ ನಂ. 260/2ರಲ್ಲಿ 2 ಎಕರೆ 5 ಗುಂಟೆ ಪ್ರದೇಶದಲ್ಲಿ 1991-92ನೇ ಸಾಲಿನಲ್ಲಿ 23 ಮಂದಿ ಫಲಾನುಭವಿಗಳಿಗೆ ಆಶ್ರಯ ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಹಲವು ವರ್ಷಗಳಾದರೂ ಸದರಿ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಕಲ್ಪನೆ ಕಾರ್ಯಗಳು ನಡೆಯದೆ ವಿಳಂಬವಾಗಿರುವ ಹಿನ್ನೆಲೆ ಇದೀಗ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಪಟ್ಟಣದ ನಾಡಕಛೇರಿಯಲ್ಲಿ ಉಪ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಹೋರಾಟಗಾರರು ಮನವಿ ಸಲ್ಲಿಸಿದರು.

ಈ ಸಂಬಂಧ ಮಾನ್ಯ ಕಂದಾಯ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಭೂಮಿಯನ್ನು ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಿ ಅಭಿವೃದ್ಧಿಪಡಿಸುವಂತೆ ಆದೇಶ ನೀಡಿದ್ದರು. ಅದರಂತೆ ಹೊಸನಗರ ತಹಶೀಲ್ದಾರ್ ಅವರು ಮೇ 5, 2026ರಂದು ಕೆರೆಹಳ್ಳಿ ರಾಜಸ್ವ ನಿರೀಕ್ಷಕರಿಗೆ ಖಾಸಗಿ ವ್ಯಕ್ತಿಗಳು ಮಾಡಿಕೊಂಡಿರುವ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿ, ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು.

ಆದರೆ ಇಂದಿಗೂ ಸ್ಥಳದಲ್ಲಿನ ಒತ್ತುವರಿ ತೆರವು ಕಾರ್ಯ ಸಂಪೂರ್ಣವಾಗಿ ಜರುಗದಿರುವುದರಿಂದ ಸ್ಥಳೀಯರು ಹಾಗೂ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರ್ಕಾರ ಕ್ರಮ ಕೈಗೊಂಡು ಭೂ ಪ್ರದೇಶವನ್ನು ತೆರವುಗೊಳಿಸಿ, ಆಶ್ರಯ ಬಡಾವಣೆ ನಿರ್ಮಾಣದ ಜೊತೆಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವರದರಾಜ್, ಸ್ಥಳೀಯರಾದ ಶೇಖರಪ್ಪ ಸೇರಿದಂತೆ ಹಲವು ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.