



A Bhadravathi man lost ₹98,000 in a cyber fraud after his colleague allegedly hacked his mobile phone using a hidden app. A case has been registered at Shivamogga Cyber Crime Police Station.
ಸ್ನೇಹಿತನಿಂದಲೇ ಮೊಬೈಲ್ ಹ್ಯಾಕ್ , ಬ್ಯಾಂಕ್ ಖಾತೆಗೆ ಕನ್ನ; ದೂರು ದಾಖಲು
ಭದ್ರಾವತಿ: ವ್ಯಕ್ತಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ, ಅವರ ಖಾತೆಯಿಂದಲೇ ಸುಮಾರು 98 ಸಾವಿರ ರೂಪಾಯಿ ವಂಚಿಸಿರುವ ಘಟನೆ ಭದ್ರಾವತಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ತಮ್ಮ ಸಹೋದ್ಯೋಗಿಗೆ ಗೂಗಲ್ ಪೇ ಮೂಲಕ 1,500 ರೂಪಾಯಿ ಹಣ ವರ್ಗಾವಣೆ ಮಾಡಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ಬ್ಯಾಂಕ್‌ನಿಂದ ಬಂದ ಮೆಸೇಜ್ ನೋಡಿ ಅವರು ಬೆಚ್ಚಿಬಿದ್ದಿದ್ದಾರೆ. ಖಾತೆಯಿಂದ ಕೇವಲ 1,500 ರೂ. ಮಾತ್ರ ಕಡಿತವಾಗದೆ, ಬರೋಬ್ಬರಿ 98 ಸಾವಿರ ರೂಪಾಯಿ ಹಣ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ ಅವರು, ತಮ್ಮ ಸಹೋದ್ಯೋಗಿಯೇ ತಿಳಿಯದಂತೆ ಮೊಬೈಲ್‌ನಲ್ಲಿ ಒಂದು ಆ್ಯಪ್ ಇನ್‌ಸ್ಟಾಲ್ ಮಾಡಿ, ಅದರ ಮೂಲಕ ಮೊಬೈಲ್ ಹ್ಯಾಕ್ ಮಾಡಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಲ್
ಘಟನೆ ಸಂಬಂಧ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
