w
Headlines
Home » ಕೊಡಚಾದ್ರಿ ಪ್ರವಾಸದಿಂದ ಮರಳುತ್ತಿದ್ದ ಕುಟುಂಬಕ್ಕೆ ದುರಂತ: ಜೀಪ್-ಟೆಂಪೋ ಭೀಕರ ಡಿಕ್ಕಿ, ಇಬ್ಬರು ಮಹಿಳೆಯರ ದುರ್ಮರಣ

ಕೊಡಚಾದ್ರಿ ಪ್ರವಾಸದಿಂದ ಮರಳುತ್ತಿದ್ದ ಕುಟುಂಬಕ್ಕೆ ದುರಂತ: ಜೀಪ್-ಟೆಂಪೋ ಭೀಕರ ಡಿಕ್ಕಿ, ಇಬ್ಬರು ಮಹಿಳೆಯರ ದುರ್ಮರಣ

GridArt 20260517

ಕೊಡಚಾದ್ರಿ ಪ್ರವಾಸದಿಂದ ಮರಳುತ್ತಿದ್ದ ಕುಟುಂಬಕ್ಕೆ ದುರಂತ: ಜೀಪ್-ಟೆಂಪೋ ಭೀಕರ ಡಿಕ್ಕಿ, ಇಬ್ಬರು ಮಹಿಳೆಯರ ದುರ್ಮರಣ

Two women from Kerala died and eight others were seriously injured after a tourist jeep returning from Kodachadri collided head-on with a tempo near Kollur in Udupi district.

ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ಮೃತರನ್ನು ಕೇರಳ ನಿವಾಸಿಗಳಾದ ಜ್ಯೋತಿ (34) ಹಾಗೂ ಆರ್ಯ ಅನೂಪ್ (26) ಎಂದು ಗುರುತಿಸಲಾಗಿದೆ.

ಕೊಡಚಾದ್ರಿ ಪ್ರವಾಸ ಮುಗಿಸಿಕೊಂಡು ಪ್ರವಾಸಿಗರನ್ನು ಹೊತ್ತು ಕೊಲ್ಲೂರಿನತ್ತ ಬರುತ್ತಿದ್ದ ಜೀಪ್ ಹಾಗೂ ಕೊಲ್ಲೂರಿನಿಂದ ನಾಗೋಡಿ ಕಡೆಗೆ ಸಾಗುತ್ತಿದ್ದ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಜೀಪ್ ಸಂಪೂರ್ಣ ಜಖಂಗೊಂಡಿದ್ದು, ಸ್ಥಳದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರಾಥಮಿಕ ಮಾಹಿತಿಯಂತೆ, ಜೀಪ್‌ನಲ್ಲಿದ್ದವರು ಕೇರಳ ಮೂಲದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಆಯನ್ (5), ಅವನಿ (8), ಅರ್ಜುನ್ (9), ಮಿನಿ (60), ಅಬೆ (37), ಅನೂಪ್ (37), ಜ್ಯೋತಿ (43) ಹಾಗೂ ಜೀಪ್ ಚಾಲಕ ದೇವರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೊಲ್ಲೂರು ಪೊಲೀಸ್ ಠಾಣೆಯ PSI ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಭೀಮಾಶಂಕರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.