w
Headlines
Home » ಅಸಮರ್ಪಕ ವಿದ್ಯುತ್ ಸಮಸ್ಯೆ: ಶಾಸಕ ಆರಗ ಜ್ಞಾನೇಂದ್ರಗೆ ತಳಲೆ ಗ್ರಾಮಸ್ಥರ ಮನವಿ, ಅಧಿಕಾರಿಗಳಿಗೆ ಗರಂ ಎಚ್ಚರಿಕೆ

ಅಸಮರ್ಪಕ ವಿದ್ಯುತ್ ಸಮಸ್ಯೆ: ಶಾಸಕ ಆರಗ ಜ್ಞಾನೇಂದ್ರಗೆ ತಳಲೆ ಗ್ರಾಮಸ್ಥರ ಮನವಿ, ಅಧಿಕಾರಿಗಳಿಗೆ ಗರಂ ಎಚ್ಚರಿಕೆ

GridArt 20260403

ಅಸಮರ್ಪಕ ವಿದ್ಯುತ್ ಸಮಸ್ಯೆ: ಶಾಸಕ ಆರಗ ಜ್ಞಾನೇಂದ್ರಗೆ ತಳಲೆ ಗ್ರಾಮಸ್ಥರ ಮನವಿ, ಅಧಿಕಾರಿಗಳಿಗೆ ಗರಂ ಎಚ್ಚರಿಕೆ

Villagers of Talale near Ripponpet protest against prolonged power outage due to a damaged transformer, affecting irrigation and drinking water. MLA Araga Jnanendra warns officials to resolve the issue within 24 hours.

ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ತಳಲೆ ಗ್ರಾಮದಲ್ಲಿ ಉಂಟಾದ ಅಸಮರ್ಪಕ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು ಶಾಸಕರಾದ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದರು.

ಮೂಗುಡ್ತಿಯಲ್ಲಿ ಮುಖಂಡ ಕಗ್ಗಲಿ ಲಿಂಗಪ್ಪ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಶಾಸಕರನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು.
ಕಳೆದ ಕೆಲವು ದಿನಗಳಿಂದ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮಕ್ಕಳಿಗೆ ಪರೀಕ್ಷೆಗೆ ತಯಾರಿ ನಡೆಸಲು ತೊಂದರೆಯಾಗುತಿದ್ದು ಹಾಗೂ ಇದರಿಂದ ಜಮೀನಿನ ಬಾವಿ ಮತ್ತು ಮೋಟಾರ್‌ಗಳಿಗೆ ವಿದ್ಯುತ್ ಲಭ್ಯವಾಗದೇ ಅಡಿಕೆ ತೋಟಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಬೆಳೆ ಹಾನಿಯಾಗುವ ಭೀತಿ ಎದುರಾಗಿದೆ. ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಂಡಿದ್ದು ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಮನವರಿಕೆ ಮಾಡಿದರು.

ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸುವಂತೆ ಆಗ್ರಹಿಸಿ, ತಳಲೆ ಗ್ರಾಮಸ್ಥರು ರಿಪ್ಪನ್ ಪೇಟೆಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಇತ್ತೀಚೆಗೆ ದಿಢೀರನೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಸ್ಥಳದಲ್ಲೇ ಪ್ರತಿಕ್ರಿಯಿಸಿದ ಶಾಸಕ ಆರಗ ಜ್ಞಾನೇಂದ್ರ ಅವರು ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡರು. 24 ಗಂಟೆಗಳೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಪರಿಹಾರ ದೊರಕುವ ಭರವಸೆಯನ್ನು ಶಾಸಕ ನೀಡಿದ್ದು, ತಳಲೆ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಯಾವಾಗ ಪರಿಹಾರವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.