ಮೇ 1 ರಿಂದ 4 ರವರೆಗೆ ಐತಿಹಾಸಿಕ ನಗರ ದರ್ಗಾದ 52ನೇ ಉರೂಸ್ ಸಂಭ್ರಮ

ಮೇ 1 ರಿಂದ 4 ರವರೆಗೆ ಐತಿಹಾಸಿಕ ನಗರ ದರ್ಗಾದ 52ನೇ ಉರೂಸ್ ಸಂಭ್ರಮ – ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಉರೂಸ್ ಆಚರಣೆಗೆ ಒಮ್ಮತದ ನಿರ್ಧಾರ

The historic Nagar Dargah (Hosanagar) will host its 52nd Urus from May 1-4, 2026. Forgetting previous differences, the united community prepares for a grand Sandal procession and massive public feeding (Annasantarpana). Read full details.”

​ಹೊಸನಗರ : ತಾಲೂಕಿನ ನಗರ ಸಮೀಪದ ಮುಡಗೊಪ್ಪ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಹಾಗೂ ಭಾವೈಕ್ಯತೆಯ ಸಂಕೇತವಾಗಿರುವ ಹಜರತ್ ಶೇಖ್ ಅಕ್ಬರ್ ಅನ್ವರ್ ಮಾಷುಂಶಾ ವಲಿಯುಲ್ಲಾ ದರ್ಗಾದ 52ನೇ ವರ್ಷದ ಉರೂಸ್ ಮಹೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ವಿಶೇಷವೆಂದರೆ, ಈ ಹಿಂದೆ ಇದ್ದಂತಹ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ಮರೆತು, ಇಡೀ ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ನಗರ ಸುಲ್ತಾನ್ ಜುಮ್ಮಾ ಮಸೀದಿ ಆಡಳಿತ ಸಮಿತಿ, ದರ್ಗಾ ಸಮಿತಿ ಹಾಗೂ ಉರೂಸ್ ಸಮಿತಿಯ ಪದಾಧಿಕಾರಿಗಳು ಜಂಟಿಯಾಗಿ ಸಭೆ ಸೇರಿ, ಈ ಬಾರಿಯ ಉರೂಸ್ ಕಾರ್ಯಕ್ರಮವನ್ನು ಒಮ್ಮತದಿಂದ ನಡೆಸಲು ನಿರ್ಧರಿಸಿದ್ದಾರೆ. ಉರೂಸ್ ಕಮಿಟಿ ಅಧ್ಯಕ್ಷರಾದ ವಿನಯ ಉಡುಪ ಹಾಗೂ ಜಿ. ಮೊಹಮ್ಮದ್ ಸಾಬ್ ರವರ ಸೂಕ್ತ ಮಾರ್ಗದರ್ಶನದಲ್ಲಿ ಹಾಗೂ ಸುಲ್ತಾನ್ ಜುಮ್ಮಾ ಮಸೀದಿ ಆಡಳಿತ ಸಮಿತಿಯ ನೇತೃತ್ವದಲ್ಲಿ ಈ ಬಾರಿಯ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ಹಾಗೂ ಸಡಗರದಿಂದ ನೆರವೇರಲಿವೆ.

​ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮ:

ಈ ಬಾರಿಯ ಉರೂಸ್ ಕಾರ್ಯಕ್ರಮವು ದಿನಾಂಕ 01-05-2026 ರಿಂದ ಆರಂಭವಾಗಿ 04-05-2026 ರವರೆಗೆ ಬರೋಬ್ಬರಿ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಮೇ 1 ರಂದು ಪ್ರಖ್ಯಾತ ಧರ್ಮಗುರುಗಳಾದ ಸಿರಾಜ್ ತಂಗಲ್ ಅವರು ಉರೂಸ್ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

​ಉರೂಸ್‌ನ ಪ್ರಮುಖ ಆಕರ್ಷಣೆಯಾದ ಪವಿತ್ರ ‘ಸಂದಲ್’ ಮೆರವಣಿಗೆ ಹಾಗೂ ‘ನಾಥ್’ ಕಾರ್ಯಕ್ರಮವು ಮೇ 3ನೇ ತಾರೀಕು ಭಾನುವಾರ ಬಹಳ ವಿಜೃಂಭಣೆಯಿಂದ ಜರುಗಲಿದೆ. ಕಾರ್ಯಕ್ರಮದ ಅಂತಿಮ ದಿನವಾದ ಮೇ 4ನೇ ತಾರೀಕು ಸೋಮವಾರ ಮಧ್ಯಾಹ್ನ ಸರ್ವಧರ್ಮೀಯರಿಗಾಗಿ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಧಾರ್ಮಿಕ ಸಮ್ಮೇಳನದಲ್ಲಿ ಧರ್ಮಗುರುಗಳು, ಹಲವಾರು ಗಣ್ಯರು ಹಾಗೂ ಸ್ಥಳೀಯ ನಾಯಕರುಗಳು ಭಾಗವಹಿಸಲಿದ್ದಾರೆ.

ಜಾತಿ, ಧರ್ಮದ ಭೇದಭಾವವಿಲ್ಲದೆ ಎಲ್ಲಾ ಸರ್ವಧರ್ಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮಿತಿ ವತಿಯಿಂದ ಕಳಕಳಿಯ ಮನವಿ ಮಾಡಲಾಗಿದೆ.

​ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಕಮಿಟಿಯ ಉಪಾಧ್ಯಕ್ಷ ಹಾಗೂ ನಗರ ಸುಲ್ತಾನ್ ಮಸೀದಿಯ ಅಧ್ಯಕ್ಷ ಹಿದಾಯತ್, ಉರೂಸ್ ಕಮಿಟಿ ಕಾರ್ಯದರ್ಶಿ ಅಯೂಬ್ ನಗರ, ದರ್ಗಾ ಕಮಿಟಿ ಕಾರ್ಯದರ್ಶಿ ಸಾದಿಕ್ ಅಲಿ ಕಚ್ಚಿಗೆಬೈಲು, ಖಜಾಂಚಿ ಇಬ್ರಾಹಿಂ ಹೊಸನಗರ, ಪ್ರಮುಖ ಸದಸ್ಯರಾದ ಅಶ್ರಫ್ ಜಯನಗರ, ಇಸಾಕ್ ಹೊಸನಗರ, ಅಬೂಬಕ್ಕರ್ ನಗರ, ಜಹೀರ್ ನಿಟ್ಟೂರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ಮುಂಬರುವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ನಾಗರ ಪಂಚಮಿ ವಿಶೇಷ : ಆಗಸ್ಟ್ 17ರಂದು ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರೆ — ಭಕ್ತರಿಗೆ ಇಲ್ಲಿದೆ ಮಾಹಿತಿ

ನಾಗರ ಪಂಚಮಿ ವಿಶೇಷ : ಆಗಸ್ಟ್ 17ರಂದು ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರೆ — ಭಕ್ತರಿಗೆ ಇಲ್ಲಿದೆ ಮಾಹಿತಿ…

57 minutes ago

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ Ripponpete Kenchanala Sri Marikamba Devi…

1 hour ago

ಅಂಬ್ಲಿಗೋಳ ಜಲಾಶಯ ಭರ್ತಿ: ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರರಿಂದ ಬಾಗಿನ ಅರ್ಪಣೆ

ಅಂಬ್ಲಿಗೋಳ ಜಲಾಶಯ ಭರ್ತಿ: ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರರಿಂದ ಬಾಗಿನ ಅರ್ಪಣೆ Shikaripura MLA B.Y. Vijayendra…

2 hours ago

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ Mysuru DRM Mudit Mittal inspected…

2 hours ago

ರಿಪ್ಪನ್‌ಪೇಟೆ–ಆಯನೂರು ರಸ್ತೆ ಬಂದ್; 9 MS ಬಳಿ ಬೃಹತ್ ಮರ ಉರುಳಿ ಟ್ರಾಫಿಕ್ ಜಾಮ್ , ಪರ್ಯಾಯ ಮಾರ್ಗ ಮಾಹಿತಿ ಇಲ್ಲಿದೆ.

ರಿಪ್ಪನ್‌ಪೇಟೆ–ಆಯನೂರು ರಸ್ತೆ ಬಂದ್; 9 MS ಬಳಿ ಬೃಹತ್ ಮರ ಉರುಳಿ ಟ್ರಾಫಿಕ್ ಜಾಮ್ , ಪರ್ಯಾಯ ಮಾರ್ಗ ಮಾಹಿತಿ…

5 hours ago

ರಮ್-ವಿಸ್ಕಿ ಪ್ರಿಯರೇ ಗಮನಿಸಿ: ಕೃತಕ ಫ್ಲೇವರ್‌ ಬಳಕೆ ಆರೋಪ, FSSAI ಕಠಿಣ ಕ್ರಮ – ಯಾವೆಲ್ಲಾ ಬ್ರ್ಯಾಂಡ್ ಮೇಲೆ ಕ್ರಮ!!?? ಈ ಸುದ್ದಿ ನೋಡಿ

ರಮ್-ವಿಸ್ಕಿ ಪ್ರಿಯರೇ ಗಮನಿಸಿ: ಕೃತಕ ಫ್ಲೇವರ್‌ ಬಳಕೆ ಆರೋಪ, FSSAI ಕಠಿಣ ಕ್ರಮ - ಯಾವೆಲ್ಲಾ ಬ್ರ್ಯಾಂಡ್ ಮೇಲೆ ಕ್ರಮ!!??…

7 hours ago