w
Headlines
Home » ಐಪಿಎಲ್ ಟಿಕೆಟ್ ತಿರಸ್ಕರಿಸಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ

ಐಪಿಎಲ್ ಟಿಕೆಟ್ ತಿರಸ್ಕರಿಸಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ

Prajavani import sites pv files article images 2023 04 19 whatsapp image 2023 04 19 at

ಐಪಿಎಲ್ ಟಿಕೆಟ್ ತಿರಸ್ಕರಿಸಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ

ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಶಾಸಕರಿಗೆ ನೀಡಲಾಗುತ್ತಿದ್ದ ಉಚಿತ ಐಪಿಎಲ್ ಟಿಕೆಟ್‌ಗಳನ್ನು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ತಿರಸ್ಕರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಳೆದ ವರ್ಷದ ಐಪಿಎಲ್ ಸಂದರ್ಭದಲ್ಲಿ ನಡೆದ ದುರಂತದಲ್ಲಿ 11 ಜನ ಅಮಾಯಕರು ಸಾವನ್ನಪ್ಪಿದ ಘಟನೆಯನ್ನು ಸ್ಮರಿಸಿಕೊಂಡ ಅವರು, ಆ ನೋವಿನ ನಡುವೆ ಟಿಕೆಟ್‌ಗಾಗಿ ಆಸಕ್ತಿ ತೋರಿಸುವುದು ಜನರ ದೃಷ್ಟಿಯಲ್ಲಿ ಅಸಮಂಜಸವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ರಾಜ್ಯ ಸರ್ಕಾರವು ಪ್ರತಿ ಶಾಸಕರಿಗೂ 3 ಉಚಿತ ಐಪಿಎಲ್ ಟಿಕೆಟ್‌ಗಳನ್ನು ನೀಡಲು ನಿರ್ಧರಿಸಿತ್ತು. ಹಿಂದಿನ ಸದನದಲ್ಲಿ ಕೆಲ ಶಾಸಕರು ಉಚಿತ ಟಿಕೆಟ್‌ಗಾಗಿ ಒತ್ತಾಯಿಸಿದ್ದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಕೆಲವು ಶಾಸಕರು ಇದನ್ನು ವಿರೋಧಿಸಿದ್ದು, ಇದೀಗ ಚನ್ನಬಸಪ್ಪ ಕೂಡ ಆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, “ಕಳೆದ ವರ್ಷದ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಆಕ್ರಂದನ ಇನ್ನೂ ಮನಸ್ಸಿನಲ್ಲಿ ಮೂಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಟಿಕೆಟ್‌ಗಾಗಿ ಪಟ್ಟು ಹಿಡಿಯುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.

ಹಾಗೆಯೇ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸರ್ಕಾರ ಅಥವಾ ಕೆ.ಎಸ್.ಸಿ.ಎ ವತಿಯಿಂದ ನೀಡಲಾಗುವ ಯಾವುದೇ ಐಪಿಎಲ್ ಟಿಕೆಟ್ ಅಥವಾ ಪಾಸ್‌ಗಳನ್ನು ಸವಿನಯವಾಗಿ ನಿರಾಕರಿಸುತ್ತಿರುವುದಾಗಿ ಹೇಳಿದ್ದಾರೆ. ಮುಂಬರುವ ಪಂದ್ಯಗಳಿಗೆ ಸಂಬಂಧಿಸಿದಂತೆ ತಮ್ಮ ಹೆಸರಿನಲ್ಲಿ ಯಾವುದೇ ಟಿಕೆಟ್ ವಿತರಿಸಬಾರದೆಂದು ಅವರು ಮನವಿ ಮಾಡಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.