Headlines

RIPPONPETE : ಜಂಬಳ್ಳಿ ತಿರುವಿನಲ್ಲಿ ಬೈಕ್‌ಗಳ ನಡುವೆ ಅಪಘಾತ : ಇಬ್ಬರಿಗೆ ಗಂಭೀರ ಗಾಯ , ಶಿವಮೊಗ್ಗಕ್ಕೆ ರವಾನೆ

RIPPONPETE : ಜಂಬಳ್ಳಿ ತಿರುವಿನಲ್ಲಿ ಬೈಕ್‌ಗಳ ನಡುವೆ ಅಪಘಾತ : ಇಬ್ಬರಿಗೆ ಗಂಭೀರ ಗಾಯ , ಶಿವಮೊಗ್ಗಕ್ಕೆ ರವಾನೆ

Two bikes collided near Jamballi turn in Hosanagara taluk, leaving two persons seriously injured. The injured were given first aid at Ripponpet PHC and shifted to Shivamogga for further treatment.

ರಿಪ್ಪನ್ ಪೇಟೆ : ಇಲ್ಲಿನ ಹೆದ್ದಾರಿಪುರ ಸಮೀಪದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಬೈಕ್‌ಗಳ ನಡುವೆ ನಡೆದ ಭೀಕರ ಡಿಕ್ಕಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆದ್ದಾರಿಪುರ ಸಮೀಪದ ಜಂಬಳ್ಳಿ ತಿರುವಿನಲ್ಲಿ ನಡೆದಿದೆ.

ಜಂಬಳ್ಳಿ ಗ್ರಾಮದ ಕಡೆಯಿಂದ ಬರುತ್ತಿದ್ದ ಟಿವಿಎಸ್ ಎಕ್ಸೆಲ್ ಬೈಕ್ ಹಾಗೂ ಗರ್ತಿಕೆರೆ ಕಡೆಯಿಂದ ರಿಪ್ಪನ್ ಪೇಟೆ ಕಡೆಗೆ ಸಾಗುತ್ತಿದ್ದ ಬಜಾಜ್ ಪಲ್ಸರ್ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಟಿವಿಎಸ್ ಎಕ್ಸೆಲ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಜಂಬಳ್ಳಿ ನಿವಾಸಿ ಸೋಮಶೇಖರ್ ಅವರಿಗೆ ಎಡಗಾಲು ಮುರಿದು ತೀವ್ರ ರಕ್ತಸ್ರಾವವಾಗಿದ್ದು, ಮತ್ತೊಬ್ಬರಾದ ಸತೀಶ್ ಅವರ ಕಾಲಿಗೂ ಗಂಭೀರವಾಗಿ ಗಾಯವಾಗಿ ಮುರಿತ ಉಂಟಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.

ಇದೇ ವೇಳೆ ಬಜಾಜ್ ಪಲ್ಸರ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ತಿಕೆರೆ ನಿವಾಸಿಗಳಾದ ಶ್ರೇಯಸ್ ಹಾಗೂ ಪ್ರಜ್ವಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಘಟನೆಯ ಮಾಹಿತಿ ತಿಳಿದು ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿದುಬರಬೇಕಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

About The Author