Headlines

ನೆಲಬಾಂಬ್ ಬಳಸಿ ಕಾಡು ಪ್ರಾಣಿಗಳ ಶಿಕಾರಿ ಜಾಲ ಪತ್ತೆ : 45 ಜೀವಂತ ನೆಲಬಾಂಬ್ ಸಹಿತ ಓರ್ವ ಸೆರೆ , ಇಬ್ಬರು ಪರಾರಿ

GridArt 20260419

ನೆಲಬಾಂಬ್ ಬಳಸಿ ಕಾಡು ಪ್ರಾಣಿಗಳ ಶಿಕಾರಿ ಜಾಲ ಪತ್ತೆ : 45 ಜೀವಂತ ನೆಲಬಾಂಬ್ ಸಹಿತ ಓರ್ವ ಸೆರೆ , ಇಬ್ಬರು ಪರಾರಿ

Forest officials in Hosanagara Taluk busted an illegal wildlife hunting operation in Haratalu reserve forest, arresting one accused and seizing 45 live country bombs along with a two-wheeler, while two suspects remain absconding.

ಹೊಸನಗರ: ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಗ್ರಾಮದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಶಿಕಾರಿ ನಡೆಸುತ್ತಿದ್ದವರ ವಿರುದ್ಧ ಅರಣ್ಯ ಇಲಾಖೆ ದಾಳಿ ನಡೆಸಿ ಒಬ್ಬರನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಏಪ್ರಿಲ್ 19, 2026 ರಂದು ಕೋಟೆತಾರಿಗಾದಿಂದ ಹರತಾಳು ಕಡೆಗೆ ಸಾಗುವ ಮುಖ್ಯ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಶಿಕಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ತಕ್ಷಣ ಕಾರ್ಯಾಚರಣೆಗೆ ಇಳಿದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಈ ವೇಳೆ ಎಂ. ಡಾಕಪ್ಪ (55), ಕೆ ಹುಣಸವಳ್ಳಿ ಗ್ರಾಮದ ನಿವಾಸಿಯನ್ನು ಬಂಧಿಸಲಾಗಿದ್ದು, ಇತರೆ ಆರೋಪಿಗಳಾದ ಭಾಸ್ಕರ (55) ಹಾಗೂ ನಾಗರಾಜ ಗೌಡ (53) ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಬಂಧಿತ ಹಾಗೂ ಪರಾರಿಯಾದ ಆರೋಪಿಗಳು ವನ್ಯಜೀವಿ ಬೇಟೆಗೆ ಜೀವಂತ ಸಿಡಿಮದ್ದುಗಳಾದ ನೆಲಬಾಂಬ್‌ಗಳನ್ನು ಬಳಸುತ್ತಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯ ವೇಳೆ 45 ಜೀವಂತ ನೆಲಬಾಂಬ್‌ಗಳು ಹಾಗೂ ಹಿರೋ ಹೊಂಡ ಕಂಪನಿಯ ಫ್ರೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ವಸ್ತುಗಳನ್ನು ಇಲಾಖಾ ವಶಕ್ಕೆ ಪಡೆದುಕೊಂಡಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ದಾಳಿಯಲ್ಲಿ ಹೊಸನಗರ ವಲಯದ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿ ಅನಿಲ್ ಬೆಳ್ಳೆನವರ್, ಹಾಗೂ ಗಸ್ತು ಅರಣ್ಯ ಪಾಲಕರಾದ ಭರತ್ ಕುಮಾರ್, ಮಂಜುನಾಥ ಡಿ., ಪ್ರಶಾಂತ ಜಿ., ಪುಟ್ಟಸ್ವಾಮಿ ಕೆ.ವಿ. ಸೇರಿದಂತೆ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಪರಾರಿಯಾದ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.