w
Headlines
Home » ಗುಡ್ ಫ್ರೈಡೇ ಪ್ರಾರ್ಥನೆ ವೇಳೆ ಜೇನುನೊಣ ದಾಳಿ: ನೂರಾರು ಭಕ್ತರಿಗೆ ಗಾಯ

ಗುಡ್ ಫ್ರೈಡೇ ಪ್ರಾರ್ಥನೆ ವೇಳೆ ಜೇನುನೊಣ ದಾಳಿ: ನೂರಾರು ಭಕ್ತರಿಗೆ ಗಾಯ

GridArt 20260403

ಗುಡ್ ಫ್ರೈಡೇ ಪ್ರಾರ್ಥನೆ ವೇಳೆ ಜೇನುನೊಣ ದಾಳಿ: ಶಿವಮೊಗ್ಗದಲ್ಲಿ ನೂರಾರು ಭಕ್ತರಿಗೆ ಗಾಯ

Hundreds of devotees were injured after a sudden bee attack during Good Friday prayers at Sacred Heart Church in Shivamogga, causing panic and disruption of the event.

ಶಿವಮೊಗ್ಗ: ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಗುಡ್ ಫ್ರೈಡೇ ಅಂಗವಾಗಿ ನಡೆಯುತ್ತಿದ್ದ ಪ್ರಾರ್ಥನೆ ವೇಳೆ ಜೇನುನೊಣಗಳ ದಾಳಿ ಸಂಭವಿಸಿ ನೂರಾರು ಭಕ್ತರು ಗಾಯಗೊಂಡ ಘಟನೆ ಇಂದು ನಡೆದಿದೆ.

ಗುಡ್ ಫ್ರೈಡೇ ಪ್ರಯುಕ್ತ ಚರ್ಚ್‌ನಲ್ಲಿ ಶಿಲುಬೆ ಹಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾವಿರಾರು ಭಕ್ತರು ಚರ್ಚ್ ಆವರಣದಲ್ಲಿ ಸೇರಿದ್ದರು. ಇದೇ ಸಮಯದಲ್ಲಿ ಏಕಾಏಕಿ ಜೇನುನೊಣಗಳು ದಾಳಿ ನಡೆಸಿದ್ದು, ಭಕ್ತರಲ್ಲಿ ಆತಂಕ ಉಂಟಾಯಿತು.

ದಾಳಿಯಿಂದ ಪಾರಾಗಲು ಹಲವರು ಚರ್ಚ್ ಒಳಗೆ ಸೇರಿ ಬಾಗಿಲು ಮುಚ್ಚಿಕೊಂಡರು. ಆದರೂ ಅಷ್ಟರಲ್ಲಾಗಲೇ ನೂರಾರು ಮಂದಿಗೆ ಜೇನುನೊಣಗಳು ಕಚ್ಚಿದ್ದರಿಂದ ಗಾಯಗಳಾಗಿವೆ. ಗಾಯಗೊಂಡವರನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಸಮೀಪದ ಅಶೋಕ ಸಂಜೀವಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಜೇನುನೊಣಗಳನ್ನು ಓಡಿಸಲು ಹೊಗೆ ಹಾಕುವ ಮೂಲಕ ಪ್ರಯತ್ನ ನಡೆಸಲಾಯಿತು. ಚರ್ಚ್‌ನ ಫಾದರ್ ಸೇರಿದಂತೆ ಹಲವರು ದಾಳಿಗೆ ಒಳಗಾದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಚರ್ಚ್ ಆವರಣದಲ್ಲಿರುವ ಮರಗಳಲ್ಲಿ ಜೇನುನೊಣಗಳು ಗೂಡು ಕಟ್ಟಿದ್ದವು. ಹಬ್ಬದ ಹಿನ್ನೆಲೆಯಲ್ಲಿ ಅವುಗಳನ್ನು ತೆರವುಗೊಳಿಸಲಾಗಿತ್ತು ಎನ್ನಲಾಗಿದ್ದು, ಇದರಿಂದ ಜೇನುನೊಣಗಳು ಅಟ್ಟಹಾಸ ಮೆರೆದಿರಬಹುದು ಎಂದು ಶಂಕಿಸಲಾಗಿದೆ.

ಘಟನೆಯ ಪರಿಣಾಮ ಶಿಲುಬೆ ಹಾದಿ ಕಾರ್ಯಕ್ರಮ ಅರ್ಧದಲ್ಲೇ ಸ್ಥಗಿತಗೊಂಡಿತು. ಆದರೂ ಬಳಿಕ ಭಕ್ತರು ಪ್ರಾರ್ಥನೆಯನ್ನು ಪೂರ್ಣಗೊಳಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.