POSTMANNEWS

ನೈಜ ಸುದ್ದಿ ನೇರ ಬಿತ್ತರ..

ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಟ್ರ್ಯಾಪ್: ಮಹಿಳೆಯನ್ನು ಮೋಸಗೊಳಿಸಿ ಅಸಭ್ಯ ವರ್ತನೆ

An unidentified man allegedly harassed a woman through a WhatsApp video call by behaving obscenely. A case has been registered at Shivamogga CEN Police Station and an investigation is underway.

ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಟ್ರ್ಯಾಪ್: ಮಹಿಳೆಯನ್ನು ಮೋಸಗೊಳಿಸಿ ಅಸಭ್ಯ ವರ್ತನೆ

ವಾಟ್ಸ್‌ಆ್ಯಪ್ ವಿಡಿಯೋ ಕಾಲ್‌ನಲ್ಲಿ ಅಸಭ್ಯ ಕೃತ್ಯ: ಅಪರಿಚಿತನಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಶಿವಮೊಗ್ಗ: ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮೂಲಕ ಮಹಿಳೆಗೆ ಅಸಭ್ಯವಾಗಿ ವರ್ತಿಸಿ ಖಾಸಗಿ ಅಂಗ ಪ್ರದರ್ಶಿಸಿದ್ದಾನೆ ಎಂಬ ಆರೋಪದಡಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಶಿವಮೊಗ್ಗದ ಮಹಿಳೆಯೊಬ್ಬರಿಗೆ (ಮಹಿಳೆಯ ಹೆಸರು ಹಾಗೂ ಊರು ಗೌಪ್ಯ) ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಸಂದೇಶ ಬಂದಿದೆ. “ನಾನು ನಿಮಗೆ ಪರಿಚಯವಿರುವ ವ್ಯಕ್ತಿ. ವಿಡಿಯೋ ಕಾಲ್ ಸ್ವೀಕರಿಸಿದರೆ ನಾನು ಯಾರು ಎಂದು ತಿಳಿಯುತ್ತದೆ” ಎಂದು ನಂಬಿಸಿದ ಆ ವ್ಯಕ್ತಿ ನಂತರ ವಿಡಿಯೋ ಕಾಲ್ ಮಾಡಿದ್ದಾನೆ.

ಮೊದಲ ಎರಡು ಬಾರಿ ಕರೆ ಬಂದಾಗ ಮಹಿಳೆ ತನ್ನ ಮುಖ ಕಾಣದಂತೆ ಕ್ಯಾಮೆರಾ ತಿರುಗಿಸಿ ಕರೆ ಸ್ವೀಕರಿಸಿದ್ದರು. ಆ ವೇಳೆ ಆ ವ್ಯಕ್ತಿ ತನ್ನ ಮುಖವನ್ನು ತೋರಿಸಿರಲಿಲ್ಲ. ಅನುಮಾನಗೊಂಡ ಮಹಿಳೆ ಎಚ್ಚೆತ್ತು, ಸಾಕ್ಷ್ಯ ಸಂಗ್ರಹಕ್ಕಾಗಿ ರಾತ್ರಿ ಮೊಬೈಲ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ಆನ್ ಮಾಡಿಕೊಂಡು ಅದೇ ಸಂಖ್ಯೆಗೆ ವಿಡಿಯೋ ಕಾಲ್ ಮಾಡಿದ್ದಾರೆ. ಆಗ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದಾನೆ. ಇದನ್ನು ಮಹಿಳೆ ಸಾಕ್ಷ್ಯವಾಗಿ ದಾಖಲಿಸಿಕೊಂಡಿದ್ದಾರೆ.

ಈ ಹಿನ್ನೆಲೆ ಮಹಿಳೆಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸುವಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author