Headlines

ಇಲಿ ಪಾಶಾಣ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು – ಸಾವಿಗೆ ಕಾರಣವಾಯ್ತಾ ಪ್ರೇಮ್ ಕಹಾನಿ

ಇಲಿ ಪಾಶಾಣ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು – ಸಾವಿಗೆ ಕಾರಣವಾಯ್ತಾ ಪ್ರೇಮ್ ಕಹಾನಿ ಶಿವಮೊಗ್ಗ: ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯುವಕನ ಆತ್ಮಹತ್ಯೆಯ ಹಿಂದೆ ಪ್ರೇಮ್ ಕಹಾನಿ ಇದೆ ಎಂದು ಹೇಳಲಾಗುತ್ತಿದೆ. ಕುಂಚೇನಹಳ್ಳಿಯ ಕಲ್ಲಾಪುರದ ನಿವಾಸಿ ಸಂಜು (9) ಇಲಿ ಪಾಷಣ ಸೇವಿಸಿ ಆತ್ಮಹತ್ಯೆಯಾಗಿದ್ದಾನೆ.    ಇಲಿ ಪಾಶಾಣ ಸೇವಿಸಿ 10 ದಿನಗಳಾಗಿದ್ದು ನಿನ್ನೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾನೆ.ಇಲಿ ಸೇವಿಸಿದ ಎರಡು ದಿನಗಳ ವರೆಗೆ ಸಂಜು ಆರಾಮಾಗಿದ್ದರು. ನಂತರ ಆರೋಗ್ಯ…

Read More

ವಿವಾಹಿತ ಮಹಿಳೆ ನೇಣಿಗೆ ಶರಣು – ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು

ವಿವಾಹಿತ ಮಹಿಳೆ ನೇಣಿಗೆ ಶರಣು – ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು ಶಿವಮೊಗ್ಗ: ನಗರದ ಮೇದಾರಿ ಕೇರಿಯ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ವಿವಾಹಿತ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಕುಟುಂಬ ದೂರಿದೆ. ಗಗನಶ್ರೀ(24) ನೇಣಿಗೆ ಶರಾಣದ  ವಿವಾಹಿತ ಮಹಿಳೆ ನೇಣಿಗೆ ಶರಣಾಗಿದ್ದಾಳೆ. ಗಾಂಧಿ ಬಜಾರ್ ನಲ್ಲಿದ್ದಾಗ ಗಗನಶ್ರೀಗೆ ಸಂದೀಪ್ ಎಂಬಾತನೊಂದಿಗೆ ಪ್ರೀತಿ ಹುಟ್ಟಿತ್ತು. ಪ್ರೀತಿ ಮದುವೆಯ ವರೆಗೆ ಕರೆದೊಯ್ದರೂ ಸುಖಕರ ಸಂಸಾರ ನಡೆಸಲು ಸಾಧ್ಯವಾಗಲಿಲ್ಲ ಎಂದು ಗೊತ್ತಾಗಿದೆ. ಮದುವೆಯಾಗಿ ಮೂರು ವರ್ಷ ಸಂಸಾರ ನಡೆಸಿದ್ದ…

Read More

ಬಿಜೆಪಿಯವರಿಂದ  ಹಲಾಲ್‌ಕೋರ್ ಬುದ್ದಿ ಪ್ರದರ್ಶನ : ಶಾಸಕ ಬೇಳೂರು ಗೋಪಾಲಕೃಷ್ಣ

ಬಿಜೆಪಿಯವರಿಂದ  ಹಲಾಲ್‌ಕೋರ್ ಬುದ್ದಿ ಪ್ರದರ್ಶನ : ಶಾಸಕ ಬೇಳೂರು ಸಾಗರ : ಕೆಜೆಪಿ ಕಟ್ಟಿದಾಗ ಯಡಿಯೂರಪ್ಪ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ಕೊಡುತ್ತೇನೆ ಎಂದು ಘೋಷಣೆ ಮಾಡಿರಲಿಲ್ಲವೇ. ಇದೀಗ ಬಜೆಟ್‌ನ ಶೇ. 1ರಷ್ಟನ್ನು ಅಲ್ಪಸಂಖ್ಯಾತರ ಶ್ರೇಯೋಭಿವೃದ್ದಿಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದರೆ ಬಿಜೆಪಿಯವರು ಹಲಾಲ್ ಬಜೆಟ್ ಎಂದು ಟೀಕಿಸುವ ಮೂಲಕ ತಮ್ಮ ಹಲಾಲ್‌ಕೋರ್ ಬುದ್ದಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ ಬೆಳಂದೂರು-ಚನ್ನಾಪುರ ಗ್ರಾಮದ ಸಂಪರ್ಕ…

Read More

ತಂದೆ-ತಾಯಿಯ ಪಾದಪೂಜೆ ಮಾಡಿದರೆ ಸಾಕು ಪುಣ್ಯ ಪ್ರಾಪ್ತಿಯಾಗುವುದು ; ಮೂಲೆಗದ್ದೆ ಶ್ರೀಗಳು

ತಂದೆ-ತಾಯಿಯ ಪಾದಪೂಜೆ ಮಾಡಿದರೆ ಸಾಕು ಪುಣ್ಯ ಪ್ರಾಪ್ತಿಯಾಗುವುದು ; ಮೂಲೆಗದ್ದೆ ಶ್ರೀಗಳು ರಿಪ್ಪನ್‌ಪೇಟೆ ; ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸುವುದರೊಂದಿಗೆ ತಾಯಿ-ತಂದೆಯವರು ಸಂಸ್ಕಾರ ಭರಿತರಾದರೆ ಮಕ್ಕಳು ಸಹ ಸಂಸ್ಕಾರ ಭರಿತರಾಗಲು ಸಾಧ್ಯವೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು. ಕಾರಗೋಡು ಗ್ರಾಮದ ಶ್ರೀ ಕಲಾನಾಥೇಶ್ವರ ದೇವಸ್ಥಾನದ ಪ್ರಥಮ ವರ್ಷದ ಪ್ರತಿಷ್ಟಾ ವರ್ಧಂತೋತ್ಸವ ಧಾರ್ಮಿಕ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇತ್ತೀಚೆಗೆ ಭಾರತ ದೇಶದಲ್ಲಿ ದೊಡ್ಡ ಕ್ರಾಂತಿಯಂತಾದ ಮಹಾನ್ ಕುಂಭ ಮೇಳದಲ್ಲಿ ಭಾಗವಹಿಸಿ ಗಂಗಾ, ಯಮುನಾ,…

Read More

ರಿಪ್ಪನ್ ಪೇಟೆಯಲ್ಲಿ ಹರತಾಳು ಹಾಲಪ್ಪರವರ ಹುಟ್ಟು ಹಬ್ಬದ ಸಂಭ್ರಮ

ರಿಪ್ಪನ್ ಪೇಟೆಯಲ್ಲಿ ಹರತಾಳು ಹಾಲಪ್ಪರವರ ಹುಟ್ಟು ಹಬ್ಬದ ಸಂಭ್ರಮ ರಿಪ್ಪನ್ ಪೇಟೆ : ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಮಂತ್ರಿ ಹರತಾಳು ಹಾಲಪ್ಪರವರ 63ನೇ ಹುಟ್ಟು ಹಬ್ಬವನ್ನು  ಶುಕ್ರವಾರ ಪಟ್ಟಣದ ಬಿಜೆಪಿ ಕಾರ್ಯಕರ್ತರು ಹಾಗೂ ಹರತಾಳು ಹಾಲಪ್ಪರ ಅಭಿಮಾನಿಗಳು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಸರ್ವ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ  ಹರತಾಳು ಹಾಲಪ್ಪರ ಹುಟ್ಟು ಹಬ್ಬದ ಅಂಗವಾಗಿ  ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು, ಸಂಜೆ ಹಿಂದೂ ಮಹಾಸಭಾ ವೇದಿಕೆಯಲ್ಲಿ ನಡೆದ ಹುಟ್ಟು ಹಬ್ಬದ ಸಮಾರಂಭದಲ್ಲಿ  ಪೌರ…

Read More

ಪ್ರೋ. ಪದ್ಮಾಶೇಖರ್ ರವರ “ಸಿದ್ಧಾಂತ ಕೀರ್ತಿ” ಪ್ರಶಸ್ತಿ

ಪ್ರೋ. ಪದ್ಮಾಶೇಖರ್ ರವರ “ಸಿದ್ಧಾಂತ ಕೀರ್ತಿ” ಪ್ರಶಸ್ತಿ ಹೊಂಬುಜ : ಜೈನ ಮಠದ ವತಿಯಿಂದ ನೀಡುವ 2025ನೇ ಸಾಲಿನ ‘ಸಿದ್ಧಾಂತಕೀರ್ತಿ’ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ, ಸಾಹಿತಿ ಹಾಗೂ ಶಿಕ್ಷಣ ತಜ್ಞರಾದ ಪ್ರೋ. ಪದ್ಮಾಶೇಖರ್ ಇವರಿಗೆ ನೀಡಲಾಗುವುದೆಂದು ಪರಮಪೂಜ್ಯ ಶ್ರೀಗಳು ಘೋಷಿಸಿರುತ್ತಾರೆ. ಈ ಪ್ರಶಸ್ತಿಯನ್ನು ವಾರ್ಷಿಕ ಮಹಾರಥಯಾತ್ರಾ ಮಹೋತ್ಸವದ ಮುನ್ನಾ ದಿನವಾದ 21-03-2025ನೇ ಶುಕ್ರವಾರದಂದು ನಡೆಯುವ ಧಾರ್ಮಿಕ ಸಭೆಯಲ್ಲಿ ನೀಡಲಾಗುವುದು. ಇವರು ಕವಯತ್ರಿ, ಲೇಖಕಿ, ಸಂಶೋಧಕಿ, ಪ್ರಾಧ್ಯಾಪಕಿ, ದಕ್ಷ ಆಡಳಿತಗಾರ್ತಿ, ವಿಮರ್ಶಕಿ ಹಾಗೂ ಮಹಿಳಾಪರ ಹೋರಾಟಗಾರ್ತಿ ಆಗಿ ಬಹುಮುಖ…

Read More

ಅಪಘಾತಪಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ NDRF ಸಿಬ್ಬಂದಿಗಳಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ.! – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..!!??

ಅಪಘಾತಪಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ NDRF ಸಿಬ್ಬಂದಿಗಳಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ.! – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..!!?? ಹೊಸನಗರ: ಡಿಸೇಲ್ ಹಾಕಿಸುತ್ತಿದ್ದ ಪಿಕಪ್ ವಾಹನಕ್ಕೆ ರಾಷ್ಟ್ರೀಯ ಪ್ರಕೃತಿ ವಿಕೋಪ‌ ನಿರ್ವಹಣಾ ತಂಡ (NDRF ) ದ ವಾಹನ ಡಿಕ್ಕಿ ಹೊಡೆದಿದ್ದಲ್ಲದೆ, , ಅಪಘಾತದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಅದರ ಸಿಬ್ಬಂದಿಗಳು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಮೂಗಿನಲ್ಲಿ ರಕ್ತ ಬರುವ ಹಾಗೇ  NDRF ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಹೊಸನಗರ ಪೆಟ್ರೋಲ್ ಬಂಕ್…

Read More

ತೀರ್ಥಹಳ್ಳಿಯ ನೂತನ ಡಿವೈಎಸ್ ಪಿ ಆಗಿ ಅರವಿಂದ್ ಕಲಗುಜ್ಜಿ

ತೀರ್ಥಹಳ್ಳಿಯ ನೂತನ ಡಿವೈಎಸ್ ಪಿ ಆಗಿ ಅರವಿಂದ್ ಕಲಗುಜ್ಜಿ ಶಿವಮೊಹ್ಗ: ಡಿವೈಎಸ್ಪಿ ಗಜಾನನ ವಾಮನ ಸುತಾರ ವರ್ಗಾವಣೆಯಿಂದ ಖಾಲಿ ಇದ್ದ ತೀರ್ಥಹಳ್ಳಿ ಡಿವೈಎಸ್ ಪಿ ಸ್ಥಾನಕ್ಕೆ  ಕಾರ್ಕಳದಲ್ಲಿ  ಡಿವೈಎಸ್’ಪಿ ಯಾಗಿ ಕಾರ್ಯ ನಿರ್ವಹಿಸುತಿದ್ದ ಅರವಿಂದ್ ಕಲಗುಜ್ಜಿ ರವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ತೀರ್ಥಹಳ್ಳಿಯಲ್ಲಿ ಈ ಹಿಂದೆ ಇದ್ದ ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರನ್ನು ತೀರ್ಥಹಳ್ಳಿಯಿಂದ ಬಾಗಲಕೋಟೆಗೆ ವರ್ಗಾವಣೆ ಮಾಡಿ  ಸರ್ಕಾರ ಅದೇಶಿಸಿತ್ತು. ಸುಮಾರು ಮೂರು ತಿಂಗಳ ನಂತರ  ನೂತನ ಡಿವೈಎಸ್’ಪಿ ಯನ್ನು ನೇಮಕಗೊಳಿಸಿ…

Read More

ರಿಪ್ಪನ್‌ಪೇಟೆ : ಬೀದಿನಾಯಿಗಳಿಂದ ಜಿಂಕೆಮರಿ ರಕ್ಷಣೆ

ರಿಪ್ಪನ್‌ಪೇಟೆ : ಬೀದಿನಾಯಿಗಳಿಂದ ಜಿಂಕೆಮರಿ ರಕ್ಷಣೆ ಕಾಡಿನಿಂದ ನಾಡಿನತ್ತ ಬಂದ ಜಿಂಕೆಯ ಮರಿಗೆ ನಾಯಿಗಳು ಬೆನ್ನಟ್ಟಿದಾಗ ಸ್ಥಳೀಯರು ಜಿಂಕೆ ಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ವಡಗೆರೆ ಗ್ರಾಮದ ಬಳಿ ಇಂದು ನಡೆದಿದೆ. ಅರಣ್ಯದಿಂದ ರಿಪ್ಪನ್‌ಪೇಟೆ ಸಮೀಪದ ವಡಗೆರೆ ಗ್ರಾಮದ ಅಮರ್ ನಾಥ್ ಕಾಮತ್ ರವರ ತೋಟದ ಬಳಿ ಬಂದ ಜಿಂಕೆ ಮರಿಯನ್ನು ಕಂಡು ಬೀದಿ ನಾಯಿಗಳು ಬೆನ್ನಟ್ಟಿವೆ. ಈ ವೇಳೆ ನಾಯಿಗಳಿಂದ ಪ್ರಾಣ ರಕ್ಷಣೆಗೆ ಜಿಂಕೆ…

Read More

ಕೋಣಂದೂರಿನಲ್ಲಿ ಕಾರುಗಳ ಸರಣಿ ಅಪಘಾತ – ಹರಿಹರಪುರ ಮಠದ ಶ್ರೀಗಳು ಸ್ವಲ್ಪದರಲ್ಲೇ ಪಾರು

ಕೋಣಂದೂರಿನಲ್ಲಿ ಕಾರುಗಳ ಸರಣಿ ಅಪಘಾತ – ಹರಿಹರಪುರ ಮಠದ ಶ್ರೀಗಳು ಸ್ವಲ್ಪದರಲ್ಲೇ ಪಾರು ತೀರ್ಥಹಳ್ಳಿ : ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಮಠದ ಸ್ವಾಮೀಜಿ ಪಾರಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಕೋಟೆಗದ್ದೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ದನವೊಂದು ದಿಢೀರ್‌ ರಸ್ತೆಗೆ ಬಂದಿದ್ದರಿಂದ ಎಸ್ಕಾರ್ಟ್‌ ವಾಹನ ಬ್ರೇಕ್‌ ಹಾಕಿದೆ. ಹಿಂಬದಿಯಲ್ಲಿದ್ದ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಎಸ್ಕಾರ್ಟ್‌ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿ ಬರುತ್ತಿದ್ದ ಮಠದ…

Read More