
ಪಂಚಭೂತಗಳಲ್ಲಿ ಲೀನವಾದ ಮಂಜುನಾಥ್ ರಾವ್
ಪಂಚಭೂತಗಳಲ್ಲಿ ಲೀನವಾದ ಮಂಜುನಾಥ್ ರಾವ್ ಕಾಶ್ಮೀರದಲ್ಲಿ ಮೃತರಾದ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಪಂಚಭೂತ ಗಳಲ್ಲಿ ಲೀನರಾದರು. ಶಿವಮೊಗ್ಗದ ತುಂಗಾ ತೀರದಲ್ಲಿರುವ ರೋಟರಿ ಚಿತಗಾರದಲ್ಲಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಪುತ್ರ ಅಭಿಜಯ್ ಬ್ರಾಹ್ಮಣ ಸಂಪ್ರದಾಯದಂತೆ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಗುಂಡಾ ಭಟ್ಟರ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಇದಕ್ಕೂ ಮೊದಲು, ಇಂದು ಬೆಳಿಗ್ಗೆ ೧೦:೩೦ ರ ಸುಮಾರಿಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಅವರ ಪಾರ್ಥಿವ ಶರೀರ ಆಗಮಿಸಿತು. ಮೃತದೇಹವನ್ನು ವಿವಿಧ…