Headlines

ರಿಪ್ಪನ್ ಪೇಟೆಯ ಸಿದ್ದಪ್ಪನಗುಡಿ ಬಳಿ ಕಾಡಾನೆ ದಾಳಿ – ತೋಟ, ಗದ್ದೆ ನಾಶ | ಆತಂಕದಲ್ಲಿ ಗ್ರಾಮಸ್ಥರು

ರಿಪ್ಪನ್ ಪೇಟೆಯ ಸಿದ್ದಪ್ಪನಗುಡಿ ಬಳಿ ಕಾಡಾನೆ ದಾಳಿ – ತೋಟ, ಗದ್ದೆ ನಾಶ | ಆತಂಕದಲ್ಲಿ ಗ್ರಾಮಸ್ಥರು

ರಿಪ್ಪನ್ ಪೇಟೆ: ಕೆರೆಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಯೊಂದು ದಾಳಿ ನಡೆಸಿ ತೋಟ ಮತ್ತು ಗದ್ದೆಗಳನ್ನು ನಾಶಮಾಡಿರುವ ಘಟನೆ ಸ್ಥಳೀಯರಲ್ಲಿ ಭಯ–ಭೀತಿಯ ವಾತಾವರಣವನ್ನು ಉಂಟುಮಾಡಿದೆ.

ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಕೆಳಗಿನ ಕೆರೆಹಳ್ಳಿಯ ಟೀಕಪ್ಪ ಗೌಡರ ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆಗಿಡಗಳನ್ನು ಮುರಿದು ನಾಶಮಾಡಿದ್ದು, ಅಕ್ಕಪಕ್ಕದ ಗದ್ದೆಗಳು ಕೂಡ ಗಂಭೀರ ಹಾನಿಗೊಳಗಾಗಿವೆ.

ಭಾನುವಾರ ರಾತ್ರಿ ಕೆರೆಹಳ್ಳಿಯ ನಾಗರದೇವರ ಗುಡಿ ಹತ್ತಿರ ಲದ್ದಿ ಹಾಕಿಕೊಂಡು ಆನೆ ತೋಟದ ಪ್ರದೇಶಕ್ಕೆ ಪ್ರವೇಶಿಸಿ, ಟೀಕಪ್ಪ ಗೌಡರ ತೋಟ ಹಾನಿಗೊಳಿಸಿ ಅಕ್ಕಪಕ್ಕದ ಗದ್ದೆ ನಾಶ ಮಾಡಿ ನಂತರ ಸಿದ್ದಪ್ಪನ ಗುಡಿ ಮಾರ್ಗವಾಗಿ ದೂನ ಗ್ರಾಮಕ್ಕೆ ಸಾಗಿದ್ದು, ಅಲ್ಲಿಂದ ಶಿವಾಜಿರಾಯರ ತೋಟವನ್ನು ತುಳಿದು ಬೈರಾಪುರ ಪ್ಲಾಂಟೇಶನ್ ಕಡೆ ಮುಂದುವರೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ, ಕಾಡಾನೆಯ ನಿಖರ ಸ್ಥಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.