POSTMANNEWS

ನೈಜ ಸುದ್ದಿ ನೇರ ಬಿತ್ತರ..

T20 ವಿಶ್ವಕಪ್ ಚಾಂಪಿಯನ್ ಕಾವ್ಯಾರವರಿಗೆ ಸ್ನೇಹ ಬಳಗದ ವತಿಯಿಂದ ಸನ್ಮಾನ

T20 ವಿಶ್ವಕಪ್ ಚಾಂಪಿಯನ್ ಕಾವ್ಯಾ.ವಿ ಸ್ನೇಹ ಬಳಗದ ವತಿಯಿಂದ ಸನ್ಮಾನ

ಟಿ–20 ಅಂಧರ ವಿಶ್ವಕಪ್‌ನಲ್ಲಿ ಭಾರತಕ್ಕೆ ಕೀರ್ತಿ ತಂದ ಮಹಿಳಾ ತಂಡದಲ್ಲಿ ರಿಪ್ಪನ್‌ಪೇಟೆಯ ಕಾವ್ಯಾ.ವಿ ಕೂಡ ಪ್ರಮುಖ ಪಾತ್ರವಹಿಸಿದ್ದರು. ಈ ಅಂತರಾಷ್ಟ್ರೀಯ ಪ್ರಶಸ್ತಿಯಿಂದ ದೇಶವನ್ನು ಬೆಳಗಿಸಿದ ಗೌರವದ ಸಾಧನೆಗೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ 95-96 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಬರುವೆ ಗ್ರಾಮದ ಬ್ರಹ್ಮೇಶ್ವರ ದೇವಸ್ಥಾನ ಆವರಣದಲ್ಲಿ ದೇವಸ್ಥಾನದ ಸಮಿತಿಯವರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸ್ನೇಹಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕದಿಂದ ಈ ವಿಶ್ವಕಪ್ ಚಾಂಪಿಯನ್‌ಷಿಪ್ ತಂಡಕ್ಕೆ ಮೂವರು ಆಟಗಾರ್ತಿಯರು ಆಯ್ಕೆಯಾಗಿದ್ದು, ಕಾವ್ಯಾ.ವಿ ಅವರು ಆಲ್–ರೌಂಡರ್ ಆಗಿ ಮಹತ್ವದ ಪಾತ್ರ ವಹಿಸಿದ್ದಾರೆ. ತಂಡದ ಗೆಲುವಿನಲ್ಲಿ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಹೇಳಿದರು.

ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಢರು , ಸದಸ್ಯರು , ಗ್ರಾಮಸ್ಥರು ಹಾಗೂ ಸ್ನೇಹ ಬಳಗದ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.

About The Author