ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ಅಧ್ಯಕ್ಷರಾಗಿ ಪ್ರೇಮಾ ಆಯ್ಕೆ
ಶಿವಮೊಗ್ಗ – ಬೆಂಗಳೂರಿನ ಭಾರತೀಯ ಸ್ಕೌಟ್ ಭವನದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ಪದಾಧಿಕಾರಿಗಳ ಸಭೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು.
ಸಭೆಯ ತೀರ್ಮಾನದಂತೆ ರಾಜ್ಯ ಅಧ್ಯಕ್ಷರಾಗಿ ಬಿ ಪ್ರೇಮಾ ಶಿವಮೊಗ್ಗ , ಉಪಾಧ್ಯಕ್ಷರಾಗಿ ನಿರ್ಮಲಾ ಹರಿಹರ , ಪ್ರಧಾನ ಕಾರ್ಯದರ್ಶಿಯಾಗಿ ಉಮಾಮಣಿ ಬೆಂಗಳೂರು,ಖಜಾಂಚಿಯಾಗಿ ವಿಶಾಲಾಕ್ಷಿ ಮಂಗಳೂರು , ಸಹ ಕಾರ್ಯದರ್ಶಿಯಾಗಿ ಪ್ರೇಮಾ ಚನ್ನಪಟ್ಟಣ ಆಯ್ಕೆಯಾದರು.
ಉಳಿದ ಎಲ್ಲಾ ಜಿಲ್ಲಾಧ್ಯಕ್ಷರು ಮತ್ತು ತಾಲೂಕ ಅಧ್ಯಕ್ಷರು ರಾಜ್ಯ ಸಮಿತಿಯ ಪದಾಧಿಕಾರಿಗಳಾಗಿರುತ್ತಾರೆ ಎಂದು ಮಹಾಸಭೆಯಲ್ಲಿ ತೀರ್ಮಾನ ಮಾಡಲಾಯಿತು..