Headlines

ಬೇಕರಿಯಲ್ಲಿ ಜ್ಯೂಸ್ ಕುಡಿದ ನಂತರ ಹಣ ಕೇಳಿದ್ದಕ್ಕೆ ಕೊಡಲಿಯಿಂದ ಹಲ್ಲೆ ಮಾಡಿದ ಭೂಪ

Man attacked with axe after asking for money after drinking juice at bakery

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯ ಬೇಕರಿಯೊಂದರಲ್ಲಿ ಜ್ಯೂಸ್ ಖರೀದಿಸಿದ ಹಣ ಪಾವತಿಸಲು ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಕೊಡಲಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಮಂಡಗದ್ದೆ ಮೂಲದ ವ್ಯಕ್ತಿಯೊಬ್ಬರು ಬೆಜ್ಜವಳ್ಳಿಯಲ್ಲಿರುವ ಬೇಕರಿಗೆ ಬಂದು ಜ್ಯೂಸ್ ಖರೀದಿಸಿದ್ದು, ಬಳಿಕ ಬೇಕರಿ ಮಾಲೀಕ ಹಣ ಪಾವತಿಸುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ಆ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣ ಕೊಡಬೇಕೆಂಬ ಪ್ರಶ್ನೆಯೇ ಇಲ್ಲ ಎಂದು ಗಲಾಟೆ ಆರಂಭಿಸಿದ್ದಾನೆ ಎನ್ನಲಾಗಿದೆ.

ಈ ಸಂದರ್ಭ ಹತ್ತಿರದ ಹೋಟೆಲ್‌ನಲ್ಲಿದ್ದ ವ್ಯಕ್ತಿಯೊಬ್ಬರು ಜಗಳ ಬಿಡಿಸಲು ಮುಂದಾದಾಗ, ಆ ಅಸಾಮಿ ಕೈಯಲ್ಲಿ ಹಿಡಿದಿದ್ದ ಕಾವು ಇಲ್ಲದ ಕೊಡಲಿಯಿಂದ ಅವರ ಕಣ್ಣಿನ ಉಬ್ಬಿನ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಇತರರ ಮೇಲೂ ಹಲ್ಲೆಗೆ ಯತ್ನಿಸಿ, ಒಬ್ಬ ವ್ಯಕ್ತಿಯ ಕೈಗೆ ಕಚ್ಚಿ ಗಾಯಗೊಳಿಸಿದ್ದಾನೆ ಎಂದು ಹೇಳಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶಿಸಿ ಜನರಲ್ಲಿ ಭಯಭೀತಿ ಉಂಟುಮಾಡಿದ ಆರೋಪದ ಹಿನ್ನೆಲೆಯಲ್ಲಿ, ಆರೋಪಿಯನ್ನು ಬಂಧಿಸಿ ಸೂಕ್ತ ಶಿಕ್ಷೆ ವಿಧಿಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.

ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.