


ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ – ಯುವಕನಿಗೆ ಗಂಭೀರ ಗಾಯ
ರಿಪ್ಪನ್ ಪೇಟೆ – ಇಲ್ಲಿನ ಹೊಸನಗರ ರಸ್ತೆಯ ಶರ್ಮಣ್ಯಾವತಿ ಹೊಳೆಯ ಸಮೀಪದ ತಿರುವಿನಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿ ಯುವಕನೊಬ್ಬನಿಗೆ ಗಂಭೀರ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ.
ಶಿವಮೊಗ್ಗದಿಂದ ಹೊಸನಗರಕ್ಕೆ ಶಿಕ್ಷಕರೊಬ್ಬರು ತೆರಳುತಿದ್ದ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಹಾಗೂ ಹಿರೈಮೈಥೆ ಗ್ರಾಮದ ಯುವಕನೊಬ್ಬ ಚಲಾಯಿಸುತಿದ್ದ ಬೈಕ್ ನಡುವೆ ಗವಟೂರು ಹೊಳೆ (ಶರ್ಮಣ್ಯಾವತಿ ಹೊಳೆ) ಬಳಿಯಲ್ಲಿ ಮುಖಾಮುಖಿ ಡಿಕ್ಕಿಯಾದ ಬೈಕ್ ನ ಹಿಂಬದಿಯಲಿದ್ದ ವೃದೆಯೊಬ್ಬರಿಗೆ ಗಾಯವಾಗಿದ್ದು , ಯುವಕನ ಕಾಲು ಮುರಿತವಾಗಿರುವ ಘಟನೆ ನಡೆದಿದೆ.
ಕೂಡಲೇ ಸ್ಥಳೀಯರು ಗಾಯಾಳುಗಳನ್ನು ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.