ಅಡಿಕೆ ತೋಟದ ಹೊಂಡಕ್ಕೆ ಬಿದ್ದು ಯುವಕ ಸಾವು – ಸಾವಿನ ಸುತ್ತ ಅನುಮಾನಗಳ ಹುತ್ತ!??
ಅಡಿಕೆ ತೋಟದ ಹೊಂಡಕ್ಕೆ ಬಿದ್ದು ಯುವಕ ಸಾವು – ಸಾವಿನ ಸುತ್ತ ಅನುಮಾನಗಳ ಹುತ್ತ!??
ರಿಪ್ಪನ್ ಪೇಟೆ : ಇಲ್ಲಿನ ಗವಟೂರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಅಡಿಕೆ ತೋಟದಲ್ಲಿ ಯುವಕನೊಬ್ಬ ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಪಟ್ಟಣದ ದೊಡ್ಡಿನಕೊಪ್ಪ ನಿವಾಸಿ ಮಂಜುನಾಥ್ (37) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗುತಿದ್ದು ತೋಟದ ಕಂದು ದಾಟುವಾಗ ಕೆಳಗೆ ಬಿದ್ದು ಗಾಯಗೊಂಡಿದ್ದ ಎನ್ನಲಾಗುತಿದ್ದು , ಯುವಕನನ್ನು ತೋಟದ ಮಾಲೀಕರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ ಅಷ್ಟರಲ್ಲಾಗಲೇ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ.
ಕುಟುಂಬಸ್ಥರ ಆರೋಪವೇನು..!!??
ಗವಟೂರಿನ ಜಗದೀಶ್ ಎಂಬುವವರ ತೋಟದಲ್ಲಿ ಇಂದು ಬೆಳಿಗ್ಗೆ ಮಂಜುನಾಥ್ ಅಡಿಕೆ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ ಕರೆ ಮಾಡಿ ಇನ್ನೂ ಸ್ವಲ ಅಡಿಕೆ ಕೊನೆ ಇದೆ ಮುಗಿಸಿ ಬರುತ್ತೇನೆ ಎಂದು ಹೇಳಿದ್ದನು ಆದರೆ 3.45 ರ ಹೊತ್ತಿಗೆ ಅವರೇ ಆಸ್ಪತ್ರೆಗೆ ಕರೆತಂದಿದ್ದಾರೆ ಆದರೆ ನಮ್ಮ ಬಳಿ ಇಂದು ಆತ ಕೆಲಸ ಮಾಡಲು ಬರಲಿಲ್ಲ ಎಂದು ಸುಳ್ಳು ಹೇಳುತಿದ್ದಾರೆ ಹಾಗೂ ಆತನ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡದೇ ಆಸ್ಪತ್ರೆಯಲ್ಲಿ ಶವ ಇರಿಸಿ ಹೋಗಿದ್ದಾರೆ ಆದ್ದರಿಂದ ಈ ಘಟನೆ ಬಗ್ಗೆ ನಮಗೆ ಅನುಮಾನವಿದೆ ಪೊಲೀಸರು ಸೂಕ್ತ ತನಿಖೆ ಮಾಡಲಿ ಎಂದು ಆರೋಪಿಸಿದ್ದಾರೆ.
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ತೆರಳಿದ ಪಿಎಸೈ ರಾಜು ರೆಡ್ಡಿ ಹಾಗೂ ಸಿಬ್ಬಂದಿಗಳು ತೋಟದ ಮಾಲೀಕರನ್ನು ವಿಚಾರಿಸಿದ್ದಾರೆ ಈ ಸಂಧರ್ಭದಲ್ಲಿ ಸ್ಥಳದಲ್ಲಿ ಗೊಂದಲವುಂಟಾಗಿ ಕುಟುಂಬಸ್ಥರು ಹಾಗೂ ತೋಟದ ಮಾಲೀಕರ ನಡುವೆ ಮಾತಿನ ಚಕಮಕಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಪ್ರಾರಂಭಿಸಿದ್ದಾರೆ..


ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ನಂತರ ತಿಳಿದುಬರಬೇಕಾಗಿದೆ.




