Headlines

ರಿಪ್ಪನ್‌ಪೇಟೆ ರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು : ಕಸ್ತೂರಿ ಕನ್ನಡ ಸಂಘ ಆಯೋಜಿಸಿರುವ ಎರಡು ದಿನಗಳ ಉತ್ಸವಕ್ಕೆ ಇಂದು ಚಾಲನೆ

ರಿಪ್ಪನ್‌ಪೇಟೆ ರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು : ಕಸ್ತೂರಿ ಕನ್ನಡ ಸಂಘ ಆಯೋಜಿಸಿರುವ ಎರಡು ದಿನಗಳ ಉತ್ಸವಕ್ಕೆ ಇಂದು ಚಾಲನೆ

ಇಂದು ನಗೆ ಹಬ್ಬ , ನಾಳೆ ಮೂರು ಮುತ್ತು ತಂಡದಿಂದ ಹಾಸ್ಯ ನಾಟಕ

ರಿಪ್ಪನ್‌ಪೇಟೆ : ಪಟ್ಟಣದ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್‌ರಾಜ್ ಅಭಿಮಾನಿ ಬಳಗ ವತಿಯಿಂದ ಆಯೋಜಿಸಿರುವ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭ ಈ ಬಾರಿ ಎರಡು ದಿನಗಳ ವೈವಿಧ್ಯಮಯ ಸಾಂಸ್ಕೃತಿಕ – ಮನರಂಜನಾ ಕಾರ್ಯಕ್ರಮಗಳೊಂದಿಗೆ ಭರ್ಜರಿಯಾಗಿ ನಡೆಯಲಿದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಜಿ ಆರ್ ಗೋಪಾಲಕೃಷ್ಣ ಹೇಳಿದರು.

ಕಾರ್ಯಕ್ರಮಗಳು ನವೆಂಬರ್ 25 ಮತ್ತು 26ರಂದು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಭಾ ಭವನದಲ್ಲಿ ಜರುಗಲಿವೆ.ಎರಡು ದಿನಗಳ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಂಗೊಳ ನೀಡಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ನವೆಂಬರ್ 25, ಮಂಗಳವಾರ — ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳು

ಬೆಳಿಗ್ಗೆ 10:00 ಗಂಟೆಗೆ
– ಚುಕ್ಕಿ ರಂಗೋಲಿ, ಬಣ್ಣ ತುಂಬುವ ಸ್ಪರ್ಧೆ

ಬೆಳಿಗ್ಗೆ 11:00 ಗಂಟೆಗೆ
– ಆರತಿ ತಟ್ಟೆ ಅಲಂಕಾರ ಸ್ಪರ್ಧೆ

ಬೆಳಿಗ್ಗೆ 12:00 ಗಂಟೆಗೆ
– ಸಂಗೀತ ಕುರ್ಚಿ ಸ್ಪರ್ಧೆ

ಮಧ್ಯಾಹ್ನ 2:00 ಗಂಟೆಗೆ
– ಒಂದು ನಿಮಿಷದ ವಿಶೇಷ ಸ್ಪರ್ಧೆ (2 ಜನರ ತಂಡಗಳಿಗಾಗಿ)

ಸಂಜೆ 6:00 ಗಂಟೆಗೆ
– ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ

ರಾತ್ರಿ ವಿಶೇಷ ಕಾರ್ಯಕ್ರಮ — ನಗೆಹಬ್ಬ

ರಾತ್ರಿ 8:00 ಗಂಟೆಗೆ
ಪ್ರಸಿದ್ಧ ಹಾಸ್ಯ ಕಲಾವಿದೆ ಸುಧಾ ಬರಗೂರು ಹಾಗೂ
‘ಬೆರಳು–ನೆರಳು’ ಖ್ಯಾತಿಯ ಪ್ರಹ್ಲಾದ್ ಆಚಾರ್ಯ ಅವರಿಂದ
ನೆರಳು–ಬೆಳಕಿನ ಆಟ (Shadow Play) ಮತ್ತು ಮನರಂಜನಾ ನಗೆಹಬ್ಬ.

ನವೆಂಬರ್ 26, ಬುಧವಾರ — ಕ್ರೀಡಾ ಸ್ಪರ್ಧೆಗಳು

ಬೆಳಿಗ್ಗೆ 10:00
– ಮಹಿಳೆಯರಿಗಾಗಿ ಥೋ-ಬಾಲ್ ಮತ್ತು ವಾಲಿಬಾಲ್ ಪಂದ್ಯಾವಳಿ

ಮಧ್ಯಾಹ್ನ 2:00 ಗಂಟೆಗೆ
– ಪುರುಷರಿಗಾಗಿ ವಾಲಿಬಾಲ್ ಪಂದ್ಯಾವಳಿ

ಸಂಜೆ 6:00 ಗಂಟೆಗೆ
– ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ

 ರಾತ್ರಿ 8:00 — ಹಾಸ್ಯ ನಾಟಕ

ಕಲೆಯ ಮೂರು ಮುತ್ತುಗಳು, ಕುಂದಾಪುರದ ಅಂತರಾಷ್ಟ್ರೀಯ ಖ್ಯಾತಿಯ ರೂಪಕಲಾ (ಕುಳ್ಳಪ್ಪು) ತಂಡದಿಂದ
“ಹೇ ದೇವೆ” ಮತ್ತು “ಗಿರಾಕಿಯೇ ಇಲ್ಲಾ ಮಾರಾಯ” ಎಂಬ
ಹಾಸ್ಯಮಯ ನಾಟಕಗಳ ವಿಶೇಷ ಪ್ರದರ್ಶನ.

ಈ ಎರಡು ದಿನಗಳ ಕಾರ್ಯಕ್ರಮಗಳು ರಿಪ್ಪನ್‌ಪೇಟೆಯಲ್ಲಿ ಕನ್ನಡದ ಸಂಸ್ಕೃತಿ, ಕಲೆ ಮತ್ತು ಮನರಂಜನೆಯ ಸಡಗರವನ್ನು ಹೆಚ್ಚಿಸಲಿದೆ. ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯಿಂದ ಸಮಾರಂಭ ಯಶಸ್ವಿಯಾಗಲಿದೆ ಎಂದು ಅವರು ತಿಳಿಸಿದರು.