




ಗಾಂಜಾ ವಶ – ನಾಲ್ವರ ಬಂಧನ
ನ್ಯಾಮತಿ – ಹೊನ್ನಾಳಿ – ಶಿವಮೊಗ್ಗ ರಸ್ತೆ ಬದಿಯ ಕಲ್ಪಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ನ್ಯಾಮತಿ ಠಾಣೆಯ ಪೊಲೀಸರು ಬಂಧಿಸಿ ಅಂದಾಜು 13.20 ಮೌಲ್ಯದ 3.1 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗದ ಅರ್ಬಾಜ್ ಖಾನ್ (27), ಮಹಮ್ಮದ್ ಹುಸೈನ್ ರಝಾ (23), ಜಾಫರ್ ಸಾದಿಕ್ (22), ಮಹಮ್ಮದ್ ರೋಹೀತ್ (31) ಹಾಗೂ ನ್ಯಾಮತಿ ತಾಲ್ಲೂಕಿನ ಹೊಸಜೋಗ ಗ್ರಾಮದ ಶಂಕರನಾಯ್ಕ (29) ಬಂಧಿತರು.
ಆರೋಪಿಗಳಿಂದ 3 ಮೊಬೈಲ್ ಮತ್ತು 2 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.