ಕಿರಿ ವಯಸ್ಸಿನಲ್ಲಿ ಹಿರಿ ಸಾಧನೆ – ಉತ್ತರಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಕಾವ್ಯಶ್ರೀ ಭಟ್
ಉತ್ತರಕನ್ನಡ: ಹಾರಬೇಕೆನ್ನೋ ಕನಸು ಕಾಣದೇ ಇರೋ ಹೆಣ್ಣು ಮನಸಿಲ್ಲ, ಆದರೆ ಆ ಕನಸು ಜವಾಬ್ದಾರಿಗೋ ಮರ್ಜಿಗೋ ಕುಸಿದು ಬೀಳೋದು ಇದ್ದೇ ಇದೆ. ಈ ಹುಡುಗಿ ಬರೀ ಆಗಸದಲ್ಲಿ ಹಾರಾಟ ಮಾಡಿಲ್ಲ ಬದಲಿಗೆ ಈಕೆಯ ಕನಸಿನ ರೆಕ್ಕೆಗಳು ಕೋಟಿ ಕಂಗಳಿಗೆ ಸ್ಫೂರ್ತಿಯಾಗಿದೆ.
ಜಪ ಮಾಡೋರ ಮಗಳ ಕೈಗೆ ಬಂತು ಜಾಯ್ಸ್ಟಿಕ್ :
ಅಪ್ಪ ಪುಟ್ಟ ಮಗುವನ್ನು ಎತ್ತಿಕೊಂಡು ಆಕಾಶದಲ್ಲಿ ವಿಮಾನ ಹಾರಾಡುತ್ತಿರುವುದನ್ನು ತೋರಿಸುತ್ತಾ ʼನೋಡು, ನೀನು ದೊಡ್ಡವಳಾದ ಮೇಲೆ ಹೀಗೆ ವಿಮಾನ ಹಾರಿಸುʼ ಎಂದು ಬಾಲ್ಯದಲ್ಲಿ ತಂದೆ ಹೇಳಿದ ಮಾತನ್ನೇ ತನ್ನ ಜೀವನದ ಗುರಿಯಾಗಿಸಿ ಇಂದು ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಆಗಿ ಹೊರಹೊಮ್ಮಿದ ಪುಣ್ಯಕ್ಷೇತ್ರ ಗೋಕರ್ಣದ ಹುಡುಗಿ, ವೈದಿಕ ಮನೆತನದ ಯುವತಿಯ ಸಾಹಸಗಾಥೆ ಇದು.
ಇಲ್ಲಿನ ಕೂರ್ಸೆ ಮನೆತನದ ಕಾವ್ಯಶ್ರೀ ಕೂರ್ಸೆ (ಭಟ್ಟ) 21ನೇ ವಯಸ್ಸಿನಲ್ಲಿ ಕಮರ್ಷಿಯಲ್ ಪೈಲೆಟ್ ಲೈಸನ್ಸಸ್ ಪಡೆದು ತಮ್ಮ ಜೀವನದ ಮಹತ್ವದ ಗುರಿಯನ್ನು ಸಾಧಿಸಿ ಊರಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಗೋವಾದಲ್ಲಿ ವೈದಿಕ ವೃತ್ತಿಯಲ್ಲಿರುವ ಲಕ್ಷ್ಮೀನಾರಾಯಣ ಕೂರ್ಸೆ ಹಾಗೂ ಶ್ಯಾಮಲಾರವರ ದಂಪತಿಗಳ ಪುತ್ರಿಯಾಗಿರುವ ಕಾವ್ಯಶ್ರೀ ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಶಿಕ್ಷಣವನ್ನು ಗೋವಾ ರಾಜ್ಯದಲ್ಲಿ ಮುಗಿಸಿ ಮಹಾರಾಷ್ಟ್ರದ ಬಾರಾಮತಿ ವಿಮಾನ ತರಬೇತಿ ಕೇಂದ್ರದಲ್ಲಿ ಒಟ್ಟು 200 ಗಂಟೆಗಳ ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್