Headlines

ರಸ್ತೇ ಅಪಘಾತ: ಆಟವಾಡುತ್ತಿದ್ದಾಗ ಕಾರು ಡಿಕ್ಕಿ – 2 ವರ್ಷದ ಮಗು ದಾರುಣ ಅಂತ್ಯ

ರಸ್ತೇ ಅಪಘಾತ: ಆಟವಾಡುತ್ತಿದ್ದಾಗ ಕಾರು ಡಿಕ್ಕಿ – 2 ವರ್ಷದ ಮಗು ದಾರುಣ ಅಂತ್ಯ

ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ದುರಂತ ಘಟನೆಯಲ್ಲಿ ಎರಡು ವರ್ಷದ ಬಾಲಕನೊಬ್ಬ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಪ್ರಾಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೋಟೆ ಗಂಗೂರು – ಸಾಗರ ರಸ್ತೆಯ ವಿರುಪಿನಕೊಪ್ಪ ಗ್ರಾಮದಲ್ಲಿ ಈ ಘಟನೆ ಶನಿವಾರ ಸಂಜೆ ನಡೆದಿದೆ.

ಷಣ್ಮುಖ ಎಂಬುವವರ ಪುತ್ರ ವಿನಯ್‌ (2) ಮೃತ ದುರ್ದೈವಿ.

ಮಗು ಮನೆಯ ಎದುರಿನ ರಸ್ತೆಯ ಬದಿಯಲ್ಲಿ ಆಟವಾಡುತಿದ್ದ ಸಮಯದಲ್ಲಿ ಕೋಟೆ ಗಂಗೂರು ದಿಕ್ಕಿನಿಂದ ಸಾಗರದತ್ತ ಬರುತ್ತಿದ್ದ ಕಾರು ಅಕಸ್ಮಾತ್ತಾಗಿ ಮಗುವಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಮಗುವಿನ ಕಾಲು, ಮೈ ಹಾಗೂ ಕೈಗಳಿಗೆ ಭಾರೀ ಪೆಟ್ಟು ತಗುಲಿತ್ತು. ಸ್ಥಳೀಯರು ತಕ್ಷಣ ಮಗುವನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಘಟನೆಯಿಂದ ಗ್ರಾಮದಲ್ಲಿ ತೀವ್ರ ದುಃಖದ ವಾತಾವರಣ ಮೂಡಿದೆ. ಮಗು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರು ಶೋಕಸಮುದ್ರದಲ್ಲಿ ಮುಳುಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.