ಕಾಡುಹಂದಿ ದಾಳಿ – ರೈತ ಪ್ರಾಣಾಪಾಯದಿಂದ ಪಾರು
ಸಾಗರ ತಾಲ್ಲೂಕು ಬಾರಂಗಿ ಹೋಬಳಿ ಕಾನೂರು ಗ್ರಾಮದ ರೈತ ರಾಮಪ್ಪ ಜಟ್ಟನಾಯ್ಕ (60) ಅವರ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಯ ತೀವ್ರತೆಯ ನಡುವೆಯೂ ಅವರು ಪ್ರಾಣಾಪಾಯದಿಂದ ಪಾರಾಗಿರುವುದು ಅಚ್ಚರಿಯ ಸಂಗತಿಯಾಗಿ ಪರಿಣಮಿಸಿದೆ.
ದುರ್ಗಮ ಪ್ರದೇಶವಾದ ಕಾನೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಕಾಡುಹಂದಿಯ ಹರಿತವಾದ ಕೋರೆಗಳಿಂದ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗೊಂಡ ರಾಮಪ್ಪ ಜಟ್ಟನಾಯ್ಕ ಅವರು ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಗಳ ಗಂಭೀರತೆಯನ್ನು ಗಮನಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ICU) ಗೆ ಸ್ಥಳಾಂತರಿಸಲಾಗಿದೆ.