Headlines

ಹೊಸನಗರವನ್ನು ಮಾದರಿ ನಗರವಾಗಿಸುವುದು ನನ್ನ ಗುರಿ – ಶಾಸಕ ಗೋಪಾಲಕೃಷ್ಣ ಬೇಳೂರು

ಹೊಸನಗರವನ್ನು ಮಾದರಿ ನಗರವಾಗಿಸುವುದು ನನ್ನ ಗುರಿ – ಶಾಸಕ ಗೋಪಾಲಕೃಷ್ಣ ಬೇಳೂರು

81.14 ಲಕ್ಷ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

ಹೊಸನಗರ: ಹೊಸನಗರವನ್ನು ಮಾದರಿ ನಗರವಾಗಿಸಲು ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಂದು ಹೊಸನಗರ ಪಟ್ಟಣ ಪಂಚಾಯತ್‌ನಿಂದ ನೂತನವಾಗಿ ನಿರ್ಮಿತವಾದ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಉದ್ಘಾಟಿಸಿ, ಸುಮಾರು 81.14 ಲಕ್ಷ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಇಂದು ಹೊಸನಗರದಲ್ಲಿ ಉದ್ಘಾಟನೆಯಾಗಿದ್ದು, ಅಸಂಘಟಿತ ಕಾರ್ಮಿಕರು ಹಾಗೂ ಬಡಜನರಿಗೆ ಇದು ಉಪಯುಕ್ತವಾಗಲಿದೆ. ಕಡಿಮೆ ದರದಲ್ಲಿ ಉಪಹಾರ ಮತ್ತು ಊಟವನ್ನು ಪಡೆಯುವ ಸೌಲಭ್ಯ ಒದಗಿಸಲಾಗಿದ್ದು, ವಿದ್ಯಾರ್ಥಿಗಳು, ಆಸ್ಪತ್ರೆಗೆ ಬರುವವರು ಹಾಗೂ ಬಡ ಜನರು ಇದರಿಂದ ಸದುಪಯೋಗ ಪಡೆಯಬೇಕು ಎಂದು ಶಾಸಕ ಗೋಪಾಲಕೃಷ್ಣ ತಿಳಿಸಿದರು. ಜೊತೆಗೆ, ಗುಣಮಟ್ಟದ ಆಹಾರ ವಿತರಣೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದರು.

81.14 ಲಕ್ಷ ರೂ. ಅನುದಾನದಲ್ಲಿ ಕೈಗೊಳ್ಳಲಿರುವ ಪ್ರಮುಖ ಕಾಮಗಾರಿಗಳು:

ಹೊಸನಗರ ಬಸ್ ನಿಲ್ದಾಣದ ಮುಂಭಾಗ ವಾಣಿಜ್ಯ ಮಳಿಗೆ ನಿರ್ಮಾಣ

  • ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಹೈ ಮಾಸ್ಕ್ ಲೈಟ್ ಅಳವಡಿಕೆ
  • ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವೇದಿಕೆ ಮುಂಭಾಗ ಮೇಲ್ಚಾವಣಿ ನಿರ್ಮಾಣ ಹಾಗೂ ಶೌಚಾಲಯ
  • ಸರ್ಕಾರಿ ಗಂಡು ಮಕ್ಕಳ ಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿಗಳ ಉನ್ನತೀಕರಣ
  • ಸರ್ಕಾರಿ ಉರ್ದು ಶಾಲೆಗೆ ರಂಗಮಂದಿರ ನಿರ್ಮಾಣ

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಸಿಂತಿಯ ಸೇರವೋ, ಶಾಹಿನಾ ನಾಸಿರ್, ಗುರುರಾಜ್, ನಿತ್ಯಾನಂದ, ಗುರುರಾಜ್ ಕೆ.ಎಸ್., ತಹಶೀಲ್ದಾರ್ ರಶ್ಮಿ ಹೆಚ್.ಜೆ., ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹರೀಶ್ ಎಂ.ಎನ್., ಚಂದ್ರಮೌಳಿ ಬಿ.ಜಿ., ಚಿದಂಬರ್ ಹೂವಿನಕೋಣೆ, ಸುಮಾ ಸುಬ್ರಮಣ್ಯ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.