POSTMAN NEWS

ನೈಜ ಸುದ್ದಿ ನೇರ ಬಿತ್ತರ..

20 ರ ಹರೆಯದ ಯುವಕ ಆತ್ಮ*ಹತ್ಯೆಗೆ ಶರಣು

GridArt 20250929 215920880 wm

20 ರ ಹರೆಯದ ಯುವಕ ಆತ್ಮ*ಹತ್ಯೆಗೆ ಶರಣು

ಶಿವಮೊಗ್ಗ, ಸೆ.29: ನಗರದ ಜಯನಗರ ಬಡಾವಣೆಯಲ್ಲಿ 20 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.

ಜಯನಗರ ಐದನೇ ತಿರುವಿನ ನಿವಾಸಿ ನೈಜಿಲ್ (20) ಎಂಬ ಯುವಕನೇ ಮೃತ. ಡಿಪ್ಲೊಮಾ ಪೂರೈಸಿದ ಬಳಿಕ ಬೆಂಗಳೂರಿನಲ್ಲಿ ಮುಂದಿನ ಕೋರ್ಸ್ ಕಲಿಯುತ್ತಿದ್ದ ಆತ, ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದನು. ಬೆಳಿಗ್ಗೆ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮೃತ ನೈಜಿಲ್ ಗುತ್ತಿಗೆದಾರ ಡಿ.ಆಂಟೋನಿ ಅವರ ಮೊಮ್ಮಗ ಹಾಗೂ ನವೀನ್–ನಿಶಾ ದಂಪತಿಗಳ ಪುತ್ರ. ಈ ಘಟನೆ ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.