Headlines

RIPPONPETE | ಅದ್ದೂರಿಯಾಗಿ ಜರುಗಿದ ಗುರುಸಾರ್ವಭೌಮರ 354ನೇ ಆರಾಧನ ಮಹೋತ್ಸವ 

ಅದ್ದೂರಿಯಾಗಿ ಜರುಗಿದ ಗುರುಸಾರ್ವಭೌಮರ 354ನೇ ಆರಾಧನ ಮಹೋತ್ಸವ 

ರಿಪ್ಪನ್‌ಪೇಟೆ: ಸಮೀಪದ ಬೈರಾಪುರ ಗ್ರಾಮದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರದ್ಧಾ ಭಕ್ತಿಯಿಂದ 354ನೇ ಗುರುಸಾರ್ವಭೌಮರ ಆರಾಧನಾ ಮಹೋತ್ಸವವು ಸಂಭ್ರಮದೊಂದಿಗೆ ಸಂಪನ್ನಗೊಂಡಿತು.

ಬೆಳಗ್ಗೆ ಗುರುರಾಯರಿಗೆ ಪಂಚಾಮೃತ ಅಭಿಷೇಕ, ಪವಮಾನ ಪೂಜೆ ಹೋಮ ಹವನಗಳು ನಂತರ ರಾಯರಿಗೆ ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗಿತು.

ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಆರಾಧನ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರ ದಂಡು ಹರಿದು ಬಂದಿತು.