January 11, 2026

ಮಾರುತಿ ವ್ಯಾನ್ ಮೇಲೆ ಬಿದ್ದ ಮರ – ಇಬ್ಬರಿಗೆ ಗಾಯ

GridArt_20250715_152249459

ಮಾರುತಿ ವ್ಯಾನ್ ಮೇಲೆ ಬಿದ್ದ ಮರ – ಇಬ್ಬರಿಗೆ ಗಾಯ

ಬಿರುಸಿನ ಗಾಳಿಗೆ ಮರವೊಂದು ವಾಹನದ ಮೇಲೆ ಉರುಳಿದ್ದು, ವಾಹನ ಜಖಂ ಆಗಿದೆ. ಪರಿಣಾಮ ಸಮೀಪದಲ್ಲಿದ್ದ ಇಬ್ಬರಿಗೆ ಗಾಯವಾಗಿದೆ.ಬಿರುಸಿನ ಗಾಳಿಗೆ ಮರವೊಂದು ವಾಹನದ ಮೇಲೆ ಉರುಳಿದ್ದು, ವಾಹನ ಜಖಂ ಆಗಿದೆ. ಪರಿಣಾಮ ಸಮೀಪದಲ್ಲಿದ್ದ ಇಬ್ಬರಿಗೆ ಗಾಯವಾಗಿದೆ.

ಸೊರಬ: ಬಿರುಸಿನ ಗಾಳಿ ಮಳೆಗೆ ಮರವೊಂದು ವಾಹನದ ಮೇಲೆ ಉರುಳಿ ಬಿದ್ದು, ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಚಂದ್ರಗುತ್ತಿ ಗ್ರಾಮದ ಸಿದ್ದಾಪುರ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಗ್ರಾಮದಲ್ಲಿ ವಾರದ ಸಂತೆಯಾದ ಹಿನ್ನೆಲೆ ಸುತ್ತಲಿನಿಂದ ಆಗಮಿಸಿದ ಗ್ರಾಮಸ್ಥರು ವಾಹನವನ್ನು ನಿಲ್ಲಿಸಿದ್ದರು. ಬಿರುಸಿನ ಗಾಳಿಗೆ ಮರವೊಂದು ವಾಹನದ ಮೇಲೆ ಉರುಳಿದ್ದು, ವಾಹನ ಜಖಂ ಆಗಿದೆ. ಪರಿಣಾಮ ಸಮೀಪದಲ್ಲಿದ್ದ ಇಬ್ಬರಿಗೆ ಗಾಯವಾಗಿದೆ.

ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ಒಣಗಿದ ಅಥವಾ ಬೀಳುವ ಹಂತದಲ್ಲಿರುವ ಮರಗಳನ್ನು ಸ್ಥಳೀಯ ಗ್ರಾಪಂ ಹಾಗೂ ಅರಣ್ಯ ಇಲಾಖೆಯವರು ತೆರವು ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

About The Author