POSTMAN NEWS

ನೈಜ ಸುದ್ದಿ ನೇರ ಬಿತ್ತರ..

ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವು

GridArt 20250602

ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವು

ವೈದ್ಯಕೀಯ ಶಿಕ್ಷಣವನ್ನ ಮುಗಿಸಿ ಇಂಟರ್ ಶಿಪ್ ನ್ನ ಮುಗಿಸುವ ಹಂತದಲ್ಲಿದ್ದ ವೇಳೆ ವಿದ್ಯಾರ್ಥಿನಿ ವಿಷ್ಣುಪ್ರಿಯ ಎಂಬ ಸುಮಾರು 22 ವರ್ಷದ ಯುವತಿ ನೇಣಿಗೆ ಶರಣಾಗಿದ್ದಾರೆ.

ಶಿವಮೊಗ್ಗ ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ಇಂಟರ್ ಶಿಪ್ ವಿದ್ಯಾರ್ಥಿನಿ ವಿಷ್ಣು ಪ್ರಿಯ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. 

ವೈದ್ಯಕೀಯ ಶಿಕ್ಷಣವನ್ನ ಮುಗಿಸಿ ಇಂಟರ್ ಶಿಪ್ ನ್ನ ಮುಗಿಸುವ ಹಂತದಲ್ಲಿದ್ದ ವೇಳೆ ವಿದ್ಯಾರ್ಥಿನಿ ವಿಷ್ಣುಪ್ರಿಯ ಎಂಬ ಸುಮಾರು 22 ವರ್ಷದ ಯುವತಿ ನೇಣಿಗೆ ಶರಣಾಗಿದ್ದಾರೆ.

ಮೂಲತಃ ಬೆಂಗಳೂರು ನಿವಾಸಿಯಾದ ವಿಷ್ಣು  ಪ್ರಿಯ ರವರ ಪೋಷಕರು ಪ್ರಸ್ತುತ ಬರ್ಲಿನ್ ದೇಶದಲ್ಲಿದ್ದಾರೆ.

ಇಂಟರ್ನ್ ಶಿಪ್ ಮುಗಿಯಲು ಕೇವಲ 10 ದಿನ‌ ಬಾಕಿ ಉಳಿದಿದ್ದು, ಈ ವೇಳೆ ಯುವತಿಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿರುವುದಿಲ್ಲ

ಶವವನ್ನ ಶಿವಮೊಗ್ಗದ ಮರಣೋತ್ತರ ಪರೀಕ್ಷೆ ಕೇಂದ್ರಕ್ಕೆ ವಿದ್ಯರ್ಥಿನಿಯ ಮೃತ ದೇಹವನ್ನ ಸಾಗಿಸಲಾಗಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.