w
Headlines
Home » SAGARA | ಮನೆ ಹಾಗೂ ದನಗಳ್ಳತನ ಮಾಡುತಿದ್ದ ಆರೋಪಿಗಳ ಬಂಧನ – ಲಕ್ಷಾಂತರ ರೂ ಮೌಲ್ಯದ ನಗದು , ಚಿನ್ನಾಭರಣ ವಶಕ್ಕೆ..!

SAGARA | ಮನೆ ಹಾಗೂ ದನಗಳ್ಳತನ ಮಾಡುತಿದ್ದ ಆರೋಪಿಗಳ ಬಂಧನ – ಲಕ್ಷಾಂತರ ರೂ ಮೌಲ್ಯದ ನಗದು , ಚಿನ್ನಾಭರಣ ವಶಕ್ಕೆ..!

N6668680111748879811752141d4888ba85abc49c7d6505919606f5280ae00659499e66c78fbe8e2d83729b.jpg

SAGARA | ಮನೆ ಹಾಗೂ ದನಗಳ್ಳತನ ಮಾಡುತಿದ್ದ ಆರೋಪಿಗಳ ಬಂಧನ – ಲಕ್ಷಾಂತರ ರೂ ಮೌಲ್ಯದ ನಗದು , ಚಿನ್ನಾಭರಣ ವಶಕ್ಕೆ..!

ಸಾಗರ : ಪಟ್ಟಣದ ಪೇಟೆ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಗಳ್ಳತನ, ದನಗಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 2 ಲಕ್ಷ ಮೌಲ್ಯದ ಚಿನ್ನಾಭರಣ, 20 ಲಕ್ಷ ಮೌಲ್ಯದ ವಾಹನ ಜಪ್ತಿ ಮಾಡಿದ್ದಾರೆ.

ಇಂದು ಪತ್ರಿಕಾ ಗೋಷ್ಠಿಯಲ್ಲಿ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯ್ಕ್ ಅವರು ಮಾಹಿತಿ ನೀಡಿದ್ದು, ದಿನಾಂಕ 07-09-2024ರಂದು ನಿಸಾರ್ ಅಹಮದ್ ಎಂಬುವರು ಮನೆಯಲ್ಲಿ ಇಲ್ಲದೇ ಇರುವಾಗ ಮನೆಗೆ ನುಗ್ಗಿ ಕಳ್ಳತನ ನಡೆದಿರುವ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 2 ಲಕ್ಷ ಮೌಲ್ಯದ 23 ಗ್ರಾಂ ತೂಕದ ಬಂಗಾರದ ಒಡವೆಗಳು, ಕೃತ್ಯಕ್ಕೆ ಬಳಸಿದಂತ 5 ಲಕ್ಷ ಮೌಲ್ಯದ ಇಕೋ ಕಾರು ಜಪ್ತಿ ಮಾಡಿರುವುದಾಗಿ ತಿಳಿಸಿದರು.

ದಿನಾಂಕ 28-05-2025ರಂದು ಉಮಾದೇವಿ ಎಂಬುವರು ಎರಡು ದನಗಳವು ಆಗಿರುವ ಬಗ್ಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 5000 ನಗದು, ಕೃತ್ಯಕ್ಕೆ ಬಳಿಸಿದಂತ ಸ್ಕಾರ್ಪಿಯೋ ಕಾರು, ಎಸ್ ಯುವಿ ಕಾರು ಜಪ್ತಿ ಮಾಡಲಾಗಿದೆ. ಇದರ ಒಟ್ಟು ಮೌಲ್ಯ 15 ಲಕ್ಷವಾಗಿದೆ ಎಂದರು.

ಈ ಪ್ರಕರಣದ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ, ಕಾರಿಯಪ್ಪ ಎಜೆ ಮಾರ್ಗದರ್ಶದಲ್ಲಿ ಕೈಗೊಳ್ಳಲಾಯಿತು. ನನ್ನ ಮೇಲ್ವಿಚಾರಣೆಯಲ್ಲಿ ಸಾಗರ ಪೇಟೆ ಠಾಣೆಯ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್ ನೇತೃತ್ವದಲ್ಲಿ ಪಿಎಸ್‌ಐ ಯಲ್ಲಪ್ಪ ಹಿರಗಣ್ಣನವರ, ಹೆಚ್ ಸಿ ಸನಾವುಲ್ಲ, ಪಿಸಿ ವಿಕಾಸ್, ವಿಶ್ವನಾಥ್, ಕೃಷ್ಣಮೂರ್ತಿ ಹಾಗೂ ಶಿವಮೊಗ್ಗ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದಂತ ಇಂದ್ರೇಶ್, ಗುರು, ವಿಜಯ್ ಒಳಗೊಂಡ ತಂಡವು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ. ತನಿಖಾ ತಂಡದ ಉತ್ತಮ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ, ಶ್ಲಾಘಿಸಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.