ನಮ್ಮೂರ್ ಎಕ್ಸ್ ಪ್ರೆಸ್ ಮಲ್ನಾಡೋತ್ಸವ ಇತಿಹಾಸ ಸೃಷ್ಟಿ
– ನೂರಾರು ಪ್ರತಿಭೆಗಳಿಗೆ ವೇದಿಕೆ: ಅದ್ದೂರಿ ವೇದಿಕೆ
– ಸುಮಾರು 6000 ಮಂದಿ ಭಾಗಿ… ನೂರಾರು ಕಲಾವಿದರಿಗೆ ಗೌರವ
– 300ಕ್ಕೂ ಹೆಚ್ಚು ಸಾಧಕರಿಗೆ ಒಂದೇ ವೇದಿಕೆಯಲ್ಲಿ ಗೌರವ
– ರಾಜ್ಯದಲ್ಲೇ ವಿಭಿನ್ನ ಕಾರ್ಯಕ್ರಮ ಮಾಡಿ ಗೆದ್ದ ಸಂಸ್ಥೆ
ರಾಜ್ಯದ ಪ್ರಸಿದ್ಧ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರ ಸಂಸ್ಕೃತಿ ಮಂದಿರ ಆವರಣ ಹಾಗೂ ಗರ್ಲ್ಸ್ ಹೈ ಸ್ಕೂಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಆರರಿಂದ ಏಳು ಸಾವಿರ ಮಂದಿ ಮೂರು ದಿನಗಳ ಕಾಲ ಭಾಗಿಯಾದರು. ಈ ಕಾರ್ಯಕ್ರಮ ಮಲೆನಾಡು ಮಾತ್ರವಲ್ಲದೆ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಯಿತು.
ಮಲೆನಾಡಿನ ಖ್ಯಾತ ರಾಜಕೀಯ, ಧಾರ್ಮಿಕ, ಸಾಹಿತ್ಯ, ಕಲೆ, ಕೃಷಿ, ಶೈಕ್ಷಣಿಕ ಕ್ಷೇತ್ರದ ಗಣ್ಯರು ಭಾಗಿಯಾಗಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕೃಷಿ ಹಾಗೂ ಶೈಕ್ಷಣಿಕ ಸಮ್ಮೇಳನ, ಆಹಾರ ಮೇಳ, ಆರ್ಟ್ ಎಕ್ಸ್ಪೋ, ಉದ್ಯೋಗ ಹಾಗೂ ಕೌಶಲ್ಯ ಮೇಳ, ಸ್ಟಾರ್ಟ್ ಅಪ್ ಹಾಗೂ ಮಹಿಳಾ ಉದ್ಯಮಿಗಳ ಸಮಾವೇಶ ಸೇರಿ ಅನೇಕ ಕಾರ್ಯಕ್ರಮಗಳು ಪ್ರತಿ ದಿನ 4 ವೇದಿಕೆಯಲ್ಲಿ ನಡೆದವು. ನೂರಾರು ಗಣ್ಯರು ಭಾಗಿಯಾದರು.
ಕಾರ್ಯಕ್ರಮದ ವಿಶೇಷತೆಗಳು
ಕೃಷಿಮೇಳ :- 30ಕ್ಕೂ ಹೆಚ್ಚು ಕೃಷಿ ಮಳಿಗೆಗಳು ಭಾಗಿ
ಆರೋಗ್ಯ ಮೇಳ :- ನಾರಾಯಣ ಹೃದಯಾಲಯ ಮತ್ತು ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ 200ಕ್ಕೂ ಹೆಚ್ಚು ಮಂದಿಗೆ ತಪಾಸಣೆ ಮತ್ತು ರಕ್ತದಾನ
10 ಕ್ಕೂ ಹೆಚ್ಚು ಚಿತ್ರ ಕಲಾವಿದರಿಂದ ಆರ್ಟ್ ಎಕ್ಸ್ ಪೋ
ಆಹಾರಮೇಳ :- 15ಕ್ಕೂ ಹೆಚ್ಚು ಮಳಿಗೆಗಳಿಂದ ಆಹಾರಮೇಳ
ಕೃಷಿ ಸಮ್ಮೇಳನ ಸಂವಾದ:- ತಜ್ಞರಿಂದ ರೈತರಿಗೆ ಮಾಹಿತಿ, 200 ಕ್ಕೂ ಹೆಚ್ಚು ರೈತರು ಭಾಗಿ
ಸುಮಾರು 15 ಮಂದಿ ರೈತ ಸಾಧಕರು ಹಾಗೂ ರೈತ ಸ್ಟಾರ್ಟ್ ಅಪ್ ಗೌರವ
ಶಿಕ್ಷಣ ಸಮ್ಮೇಳನದಲ್ಲಿ ಶಿಕ್ಷಣದ ಬಗ್ಗೆ ಮಾಹಿತಿ, ಉದ್ಯೋಗ ಪಡೆಯುವ ಬಗ್ಗೆ ಕಾರ್ಯಗಾರ
50ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಉದ್ಯೋಗ ಮೇಳದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗಿ
600 ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗಿ, 250 ಮಂದಿಗೆ ಉದ್ಯೋಗ ಸೃಷ್ಟಿ
ಮಲೆನಾಡಿನ ಮಹಿಳಾ ಮತ್ತು ಸ್ಟಾರ್ಟ್ ಅಪ್ ಉದ್ಯಮಿಗಳ ಸಮ್ಮೇಳನದಲ್ಲಿ ಸುಮಾರು 50ಕ್ಕೂ ಹೆಚ್ಚು ಮಲೆನಾಡಿನ ಸ್ಟಾರ್ಟ್ ಅಪ್ ಹಾಗೂ ಮಹಿಳಾ ಉದ್ಯಮಿಗಳಿಗೆ ಗೌರವಿಸಿ ಸನ್ಮಾನ ಮಾಡಲಾಯಿತು. ಈ ಮೂಲಕ ಮಲೆನಾಡಿಗೆ ಮಹಿಳಾ ಮತ್ತು ಸ್ಟಾರ್ಟ್ ಅಪ್ ಸೇವೆಯನ್ನು ನೀಡುವಂತೆ ಮನವಿ ಮಾಡಲಾಯಿತು.
ಮಲೆನಾಡಿನ ವಿವಿಧ ತಾಲೂಕಿನ ಸುಮಾರು 33 ಮಂದಿಗೆ ಮಲ್ನಾಡ್ ಐಕಾನ್ ಅವಾರ್ಡ್ 2024, ಮಲ್ನಾಡ್ ವಿಮೆನ್ ಅಚಿವರ್ ಅವಾರ್ಡ್ – 2024, ಮಲ್ನಾಡ್ ಬಿಸಿನೆಸ್ ಅಚಿವರ್ಸ್ ಅವಾರ್ಡ್ – 2024 ನೀಡಿ ಅವರು ಮಲೆನಾಡಿಗೆ ನೀಡಿದ ಕಾಣಿಕೆ, ಕೊಡುಗೆ, ಸೇವೆ, ಉದ್ಯೋಗ ಸೃಷ್ಟಿಯನ್ನು ಗೌರವಿಸಲಾಯಿತು.
ನೃತ್ಯ ಸ್ಪರ್ಧೆ, ಡ್ಯಾನ್ಸ್ ಸ್ಪರ್ಧೆ ರಂಗು!
ಮಲೆನಾಡಿನ ವಿವಿಧ ತಾಲೂಕಿನ ಪ್ರತಿಭಾವಂತರಿಗಾಗಿ ನೃತ್ಯ ಸ್ಪರ್ಧೆ, ಡ್ಯಾನ್ಸ್ ಸ್ಪರ್ಧೆ ಮಾಡಿದ್ದು 50ಕ್ಕೂ ಹೆಚ್ಚು ಕಲಾವಿದರು ಭಾಗಿಯಾದರು. ಮ್ಯೂಸಿಕ್ ನೈಟ್, ಡ್ಯಾನ್ಸ್ ಎಕ್ಸ್ಪ್ರೆಸ್, ಕಾಮಿಡಿ ಶೋಗಳ ಮೂಲಕ ಸಾವಿರಾರು ಜನರಿಗೆ ಮನೋರಂಜನೆ ನೀಡಲಾಗಿದ್ದು, ಮಲೆನಾಡಿನಲ್ಲಿ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿ ಹೊರಹೊಮ್ಮಿತು.
ಸ್ಥಳೀಯ 50ಕ್ಕೂ ಹೆಚ್ಚು ಕಲಾವಿದರಿಗೆ ಸಂಗೀತ, ನೃತ್ಯ, ಕಾಮಿಡಿ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಅವಕಾಶವನ್ನು ನೀಡಲಾಯಿತು.
ಮಲೆನಾಡಲ್ಲಿ ಇತಿಹಾಸ ಸೃಷ್ಟಿ
ಮೂರು ದಿನಗಳ ಕಾಲ ನಡೆದ ಈ ಅದ್ದೂರಿ ಕಾರ್ಯಕ್ರಮವು ಮಲೆನಾಡಿನಲ್ಲಿ ಒಂದು ಇತಿಹಾಸವನ್ನು ಸೃಷ್ಟಿಸಿದ್ದು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಹೊರಹೊಮ್ಮಿತು. ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಂತೆ ಮಾದರಿ ಕಾರ್ಯಕ್ರಮವಾಗಿದ್ದು ಭಾಗವಹಿಸಿದ ಎಲ್ಲಾ ಗಣ್ಯರು ಸಾಂಸ್ಕೃತಿಕ ಕ್ಷೇತ್ರದ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದರು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಉದ್ಯಮ, ಸಹಕಾರಿ, ಕೃಷಿ, ಸಾಮಾಜಿಕ ಕ್ಷೇತ್ರದ ಗಣ್ಯರು ಸದಸ್ಯರು ಭಾಗಿಯಾದರು. ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಅನೇಕ ಸಂಘಟನೆಗಳು ಸಂಘ ಸಂಸ್ಥೆಗಳು, ಪದಾಧಿಕಾರಿಗಳು ಭಾಗಿಯಾಗಿದ್ದವು. ಸುಮಾರು 6000 ದಿಂದ 7000 ಜನ ಮೂರು ದಿನದ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು.
ನಮ್ಮೂರ್ ಎಕ್ಸ್ಪ್ರೆಸ್ ಮಲ್ನಾಡೋತ್ಸವದ ಎಲ್ಲಾ ಕಾರ್ಯಕ್ರಮಗಳು ನಮ್ಮೂರ್ ಎಕ್ಸ್ಪ್ರೆಸ್ ಫೇಸ್ಬುಕ್, ನಮ್ಮೂರ್ ಎಕ್ಸ್ಪ್ರೆಸ್ ಇನ್ಸ್ಟಾಗ್ರಾಮ್, ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ನಲ್ಲಿ ಪ್ರಸಾರವಾಗಿದೆ. ಎಲ್ಲಾ ಮಾಹಿತಿಯನ್ನು ನಮ್ಮೂರ್ ಎಕ್ಸ್ಪ್ರೆಸ್ ವೆಬ್ಸೈಟ್ನಲ್ಲಿ ಕೂಡ ಮಲ್ನಾಡೋತ್ಸವ ಎಂಬ ವಿಭಾಗದಲ್ಲಿ ಪ್ರಕಟ ಮಾಡಲಾಗುತ್ತಿದೆ.