ಅದ್ದೂರಿಯಾಗಿ ಜರುಗಿದ ಕೆಂಚನಾಲ ಹಜರತ್ ಸೈಯದ್ ಚಮನ್ ಷಾ ವಲಿಯೂಲ್ಲಾ ದರ್ಗಾದ ಉರೂಸ್ ಕಾರ್ಯಕ್ರಮ
ಕೆಂಚನಾಲ : ಇಲ್ಲಿನ ಹಜರತ್ ಸೈಯದ್ ಚಮನ್ ಷಾ ವಲಿಯೂಲ್ಲಾ ದರ್ಗಾದ ಉರೂಸ್ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಜರುಗಿತು.
ಕೆಂಚನಾಲ ಸುನ್ನಿ ಜಾಮೀಯಾ ಮಸೀದಿಯ ಖತೀಬ್ ರವರು ದುವಾ ಮಾಡುವ ಮೂಲಕ ಸಂದಲ್ ಮೆರವಣಿಗೆಗೆ ಚಾಲನೆ ನೀಡಿದರು.
ಕೆಂಚನಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂದಲ್ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ದಫ಼್ ಬಾರಿಸುವ ಮೂಲಕ ಹಜರತ್ ಸೈಯದ್ ಚಮನ್ ಷಾ ರವರ ಸಂದಲ್ ಮೆರವಣಿಗೆಗೆ ರಂಗು ತಂದರು.ನೂರಾರು ಭಕ್ತಾದಿಗಳು ಸಂದಲ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ರಾತ್ರಿ ಎಲ್ಲಾ ಭಕ್ತಾಧಿಗಳಿಗೆ ದರ್ಗಾ ಕಮಿಟಿ ವತಿಯಿಂದ ಬೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯ ಉಬೇದುಲ್ಲಾ ಷರೀಫ್, ದೂದ್ ಪೀರ್, ಅಬ್ದುಲ್ ಘನಿ ಮತ್ತು ಗ್ರಾಪಂ ಸದಸ್ಯರಾದ ಮೊಹಮ್ಮದ್ ಷರೀಫ್ ,ಪರಮೇಶಿ,ಪುಟ್ಟಣ್ಣ, ಲಕ್ಷಮ್ಮ,ಹೂವಮ್ಮ,ರಾಮಪ್ಪ ಹಾಗೂ ಖಲೀಲ್ ಷರೀಫ್, ಅಸ್ಲಂ ,ಅಕ್ಬರ್ , ಸಲೀಮ್ ,ತಬ್ರೇಜ್ , ಜಮೀಲ್ ,ಸೋನು ,ರಾಹಿಲ್ ,ಇಬ್ರಾಹಿಂ ಹಾಗೂ ಇನ್ನಿತರರಿದ್ದರು.