January 11, 2026

ಆಸ್ತಿಗಾಗಿ ಮಚ್ಚು, ದೊಣ್ಣೆಯಿಂದ ಸ್ವಂತ ಮಾವನ ಮೇಲೆಯೇ ಸೊಸೆ ಅಟ್ಯಾಕ್!

n662810209174627213195546dc5c3e7e98b422ee11a563611eece8a424438a12aff96dcacb3861a2941507.jpg

ಆಸ್ತಿಗಾಗಿ ಮಚ್ಚು, ದೊಣ್ಣೆಯಿಂದ ಸ್ವಂತ ಮಾವನ ಮೇಲೆಯೇ ಸೊಸೆ ಅಟ್ಯಾಕ್!

ಆಸ್ತಿಗಾಗಿ ಮಚ್ಚು, ದೊಣ್ಣೆಯಿಂದ ಸ್ವಂತ ಮಾವನ ಮೇಲೆಯೇ ಸೊಸೆ ಅಟ್ಯಾಕ್!

ಆಸ್ತಿಗಾಗಿ ಮಚ್ಚು, ದೊಣ್ಣೆಯಿಂದ ಸ್ವಂತ ಮಾವನ ಮೇಲೆಯೇ ಸೊಸೆ ಅಟ್ಯಾಕ್!

ಆಸ್ತಿ ವಿಚಾರಕ್ಕೆ ಸ್ವಂತ ಮಾನವ ಮೇಲೆಯೇ ಸೊಸೆಯೋರ್ವಳು ಕೆಲ ಗೂಂಡಾಗಳೊಂದಿಗೆ ಆಗಮಿಸಿ ಲಾಂಗ್ ಮಚ್ಚು, ದೊಣ್ಣೆಯಿಂದ ಅಟ್ಯಾಕ್ ಮಾಡಿರುವ ಘಟನೆ ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲಿ ನಡೆದಿದೆ.

ಶೃತಿ ಎಂಬ ಸೊಸೆ ಐದಾರು ಜನರ ಗುಂಪುಕಟ್ಟಿಕೊಂಡು ಮಾವ ಪ್ರಭು ಎಂಬುವವರ ಮನೆಗೆ ಬಂದು ಹಲ್ಲೆಗೆ ಯತ್ನಿಸಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮನೆ ಬಾಗಿಲು, ಕಿಟಕಿಯನ್ನು ದೊಣ್ಣೆ ಮಚ್ಚಿನಿಂದ ಹೊಡೆದು ಹಾನಿ ಮಾಡಿರುವುದು ಥೇಟ್ ಸಿನಿಮೀಯ ರೀತಿಯಲ್ಲಿ ಕೃತ್ಯ ಎಸಗಲಾಗಿದೆ. ಮಹದೇವಪುರ ಬಿಬಿಎಂಪಿ ಆಫೀಸ್‌ನಲ್ಲಿ ಕಂಪ್ಯೂಟರ್ ಆಪರೇಟರ್‌ ಆಗಿ ಶೃತಿ ಕೆಲಸ ಮಾಡುತ್ತಿದ್ದಾರಂತೆ.

ಕೊಡಿಗೆಹಳ್ಳಿಯಲ್ಲಿರುವ ಸರ್ವೆ 20/1 3 ಎಕರೆ 38 ಗುಂಟೆ ಜಾಗವಿದ್ದು, ಇದು ದಾಳಿಗೆ ಒಳಗಾದ ಪಾಪಯ್ಯ ಪ್ರಭು ಅವರ ಅಜ್ಜನ ಆಸ್ತಿ. ಇದೇ ವಿಚಾರಕ್ಕೆ ಪ್ರಭು ಹಾಗೂ ಶೃತಿ ತಾಯಿ ವಜ್ರಮ್ಮ ನಡುವೆ ಗಲಾಟೆ ನಡೆದಿತ್ತು. ಸದ್ಯ ಈ ಆಸ್ತಿ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕೇಸ್ ಕ್ಲೀಯರ್ ಆದಮೇಲೆ ದುಡ್ಡು ಕೊಡುವುದಾಗಿ ಪ್ರಭು ಅವರು ಹೇಳಿದ್ದರೂ, ದುಡ್ಡು ಕೊಟ್ಟಿಲ್ಲ ಅಂದ್ರೆ ಬಿಡಲ್ಲ ಎಂದು ಧಮ್ಕಿ ಹಾಕಲು ಶೃತಿ ಈ ದಾಳಿ ನಡೆಸಿದ್ದಾರೆಂಬ ಆರೋಪವಿದೆ.

ದಾಳಿ ವೇಳೆ ಪ್ರಭು ಕುಟುಂಬಸ್ಥರು ಮನೆಯ ಡೋರ್ ಲಾಕ್​ ಮಾಡಿಕೊಂಡು ಬಚಾವ್ ಆಗಿದ್ದು, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಶೃತಿ & ಗ್ಯಾಂಗ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

About The Author

Leave a Reply

Your email address will not be published. Required fields are marked *