w
Headlines
Home » ಪುತ್ರನ ವಿವಾಹಕ್ಕೆ  ಮಳಲಿಮಠದ ಶ್ರೀಗಳಿಗೆ ಹಾಗೂ ಬೃಹನ್ಮಠದ  ಶ್ರೀಗಳಿಗೆ  ಅಹ್ವಾನ ನೀಡಿದ  ಸಂಸದ ಬಿ.ವೈ.ರಾಘವೇಂದ್ರ

ಪುತ್ರನ ವಿವಾಹಕ್ಕೆ  ಮಳಲಿಮಠದ ಶ್ರೀಗಳಿಗೆ ಹಾಗೂ ಬೃಹನ್ಮಠದ  ಶ್ರೀಗಳಿಗೆ  ಅಹ್ವಾನ ನೀಡಿದ  ಸಂಸದ ಬಿ.ವೈ.ರಾಘವೇಂದ್ರ

GridArt 20250428 144953426.jpg

ಪುತ್ರನ ವಿವಾಹಕ್ಕೆ  ಮಳಲಿಮಠದ ಶ್ರೀಗಳಿಗೆ ಹಾಗೂ ಬೃಹನ್ಮಠದ  ಶ್ರೀಗಳಿಗೆ  ಅಹ್ವಾನ ನೀಡಿದ  ಸಂಸದ ಬಿ.ವೈ.ರಾಘವೇಂದ್ರ

ಪುತ್ರನ ವಿವಾಹಕ್ಕೆ  ಮಳಲಿಮಠದ ಶ್ರೀಗಳಿಗೆ ಅಹ್ವಾನ ನೀಡಿದ  ಸಂಸದ ಬಿ.ವೈ.ರಾಘವೇಂದ್ರ

ರಿಪ್ಪನ್‌ಪೇಟೆ;-ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರರವರ ಪುತ್ರನ ವಿವಾಹ ಸಮಾರಂಭಕ್ಕೆ  ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಜಿಯವರನ್ನು  ಸಂಸದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದು ಸ್ವಾಮಿಜಿಯವರನ್ನು ಅಹ್ವಾನಿಸಿದರು.

ಇದೇ ಸಂದರ್ಭದಲ್ಲಿ ಮಳಲಿಮಠದ ಶ್ರೀಗಳು ಸಂಸದ ಬಿ.ವೈ.ರಾಘವೇಂದ್ರರವರನ್ನು  ಸನ್ಮಾನಿಸಿ ಆಶೀರ್ವದಿಸಿ ಶುಭಹಾರೈಸಿದರು.

ಮಗನ ವಿವಾಹಕ್ಕೆ   ಕೋಣಂದೂರು ಬೃಹನ್ಮಠದ  ಶ್ರೀಗಳಿಗೆ  ಅಹ್ವಾನ ನೀಡಿದ  ಸಂಸದ ಬಿ.ವೈ.ರಾಘವೇಂದ್ರ

ರಿಪ್ಪನ್‌ಪೇಟೆ;-ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರರವರ ಪುತ್ರನ ವಿವಾಹ ಸಮಾರಂಭಕ್ಕೆ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಯವರನ್ನು  ಸಂಸದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದು ಸ್ವಾಮಿಜಿಯವರನ್ನು  ವಿವಾಹ ಸಮಾರಂಭಕ್ಕೆ ಅಹ್ವಾನಿಸಿದರು.

ಇದೇ ಸಂದರ್ಭದಲ್ಲಿ ಕೋಣಂದೂರು ಬೃಹನ್ಮಠದ   ಶ್ರೀಗಳು ಸಂಸದ ಬಿ.ವೈ.ರಾಘವೇಂದ್ರರವರನ್ನು  ಸನ್ಮಾನಿಸಿ ಆಶೀರ್ವದಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೋಣಂದೂರು ಕೆ.ಆರ್.ಪ್ರಕಾಶ,ಕುಕ್ಕೆ ಪ್ರಶಾಂತ,ತಾಲ್ಲೂಕ್ ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ ಅಲುವಳ್ಳಿ, ಶಶಿಕುಮಾರ ಕೋಟೆಗದ್ದೆ, ನಾಗಾರ್ಜುನಸ್ವಾಮಿ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.