POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಆಯನೂರು, ಕುಂಸಿ ಸುತ್ತಮುತ್ತ ಭಾರಿ ಮಳೆ, ಸಿಡಿಲಿಗೆ 40 ಕುರಿಗಳು ಸಾವು

Screenshot 20250415 211342 Chrome.jpg

ಆಯನೂರು, ಕುಂಸಿ ಸುತ್ತಮುತ್ತ ಭಾರಿ ಮಳೆ, ಸಿಡಿಲಿಗೆ 40 ಕುರಿಗಳು ಸಾವು

ಶಿವಮೊಗ್ಗ : ಕುಂಸಿ, ಆಯನೂರು ಸುತ್ತಮುತ್ತ ಇಂದು ಸಂಜೆ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿದೆ. ಇದರಿಂದ ವಿವಿಧೆಡೆ ಆಸ್ತಿಪಾಸ್ತಿ ಹಾನಿ ಉಂಟಾಗಿದೆ.

ಸಿಡಿಲು ಬಡಿದು ಸುಮಾರು 40 ಕುರಿಗಳು ಸಾವನ್ನಪ್ಪಿವೆ. ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.ಆಯನೂರು ಸುತ್ತಮುತ್ತ ಇಂದು ಸಂಜೆ ಸುಮಾರು ಮುಕ್ಕಾಲು ಗಂಟೆಗು ಹೆಚ್ಚು ಹೊತ್ತು ಭಾರಿ ಮಳೆಯಾಗಿದೆ. ಗುಡುಗು, ಗಾಳಿ ಸಾಹಿತ ಜೋರು ಮಳೆ ಸುರಿದಿದೆ.

ಸಿಡಿಲಿಗೆ ಕುರಿಗಳು ಸಾವು ;

ಆಯನೂರು ಸಮೀಪದ ಬಾಳೆಕೊಪ್ಪ ಗ್ರಾಮದಲ್ಲಿ ಸಿಡಿಲಿಗೆ ಸುಮಾರು 40 ಕುರಿಗಳು ಸಾವನ್ನಪ್ಪಿವೆ. ಇಲ್ಲಿನ ಹುಚ್ಚಪ್ಪ ಎಂಬುವವರಿಗೆ ಸೇರಿದ ಕುರಿಗಳನ್ನು ಗುಡ್ಡದ ಬಯಲಿನಲ್ಲಿ ಮೇಯಿಸುತ್ತಿದ್ದರು. ಈ ಸಂದರ್ಭ ಗುಡುಗು ಸಹಿತ ಮಳೆ ಶುರುವಾಗಿದೆ.ಈ ವೇಳೆ ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ.

ಇದರಿಂದ ರೈತ ಹುಚ್ಚಪ್ಪ ಅವರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಗಾಳಿ, ಮಳೆಯಿಂದಾಗ ಈ ಭಾಗದಲ್ಲಿ ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.