January 11, 2026

ರಿಪ್ಪನ್ ಪೇಟೆಯಲ್ಲಿ ಗುಡ್ ಫ್ರೈಡೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ದೇವರ ಮೆರವಣಿಗೆ

ರಿಪ್ಪನ್ ಪೇಟೆಯಲ್ಲಿ ಗುಡ್ ಫ್ರೈಡೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ದೇವರ ಮೆರವಣಿಗೆ

ರಿಪ್ಪನ್ ಪೇಟೆ :ಪಟ್ಟಣದ ಗುಡ್ ಶೆಪರ್ಡ್ ದೇವಾಲಯದಲ್ಲಿ ಗುಡ್ ಫ್ರೈಡೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.

ವೀಡಿಯೋ ಇಲ್ಲಿ ವೀಕ್ಷಿಸಿ

ಶುಕ್ರವಾರ ಬೆಳಗ್ಗೆಯಿಂದಲೇ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನದ ತನಕ ವಿವಿಧ ಪೂಜೆ ಹಾಗೂ ದೇವರ ಮೆರವಣಿಗೆಯೊಂದಿಗೆ  ಸಂಪನ್ನಗೊಂಡಿತು.

ಗುಡ್ ಫ್ರೈಡೆ (Good Friday) ಕ್ರೈಸ್ತ ಧರ್ಮದಲ್ಲಿ ಬಹುಮುಖ್ಯವಾದ ಪವಿತ್ರ ದಿನವಾಗಿದ್ದು, ಇದು ಯೇಸು ಕ್ರಿಸ್ತನು ಶಿಲುಬೆಗೇರಿಸಲ್ಪಟ್ಟ ದಿನವೆಂದು ನಂಬಲಾಗುತ್ತದೆ.
ಯೇಸು ಕ್ರಿಸ್ತನ ಬಲಿದಾನ: ಗುಡ್ ಫ್ರೈಡೆ ಯೇಸು ಕ್ರಿಸ್ತನು ಮನುಷ್ಯರ ಪಾಪಗಳಿಗೆ ಪರಿಹಾರವಾಗಿ ತನ್ನ ಪ್ರಾಣ ತ್ಯಾಗ ಮಾಡಿದ ದಿನವೆಂದು ಧಾರ್ಮಿಕ ನಂಬಿಕೆಯಿದ

ಆಚರಣೆ:

ಮೌನ ಮತ್ತು ಪ್ರಾರ್ಥನೆ: ಗುಡ್ ಫ್ರೈಡೆ ದಿನದಂದು ಕ್ರೈಸ್ತರು ಚರ್ಚ್‌ಗಳಿಗೆ ಹೋಗಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಾರೆ.

ಉಪವಾಸ: ಕೆಲವರು ಈ ದಿನ ಉಪವಾಸವಿದ್ದು ದೇವನ ಸ್ಮರಣೆಯಲ್ಲಿ ತೊಡಗಿರುತ್ತಾರೆ.

ಶಿಲುಬೆ ಯಾತ್ರೆ: ಯೇಸುವಿನ ಶಿಲುಬೆಗೇರಿದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಪುನರ್‌ಅನುಭವಿಸುವ ರೀತಿಯಲ್ಲಿ   ಮೆರವಣಿಯನ್ನು ಏರ್ಪಡಿಸಲಾಗಿತ್ತು

ಈ ದಿನವನ್ನು ಆನಂದದಿಂದಲ್ಲ, ಬದಲಾಗಿ ಧ್ಯಾನ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಈಸ್ಟರ್ ಸಂಡೆ (ಯೇಸು ಪುನರುತ್ಥಾನಗೊಂಡ ದಿನ) ಒಂದು ಸಂತಸದ ದಿನವಾಗಿದ್ದರೆ, ಗುಡ್ ಫ್ರೈಡೆ ಆತನ ತ್ಯಾಗವನ್ನು ನೆನಪಿಸುವ ದಿನವಾಗಿದೆ.
ಗುಡ್ ಶಫರ್ಡ್ ಚರ್ಚ್ ನ ಧರ್ಮ ಗುರು  ರೆ. ಫಾ. ಬಿನೋಯ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನಂತರ ನಡೆದ ದೇವರ ಮೆರವಣಿಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧಡೆಗಳಿಂದ ಆಗಮಿಸಿದ ನೂರಾರು ಭಕ್ತರು  ಭಾಗವಹಿಸಿದ್ದರು

About The Author

Leave a Reply

Your email address will not be published. Required fields are marked *