ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಿದ್ದ ಇಬ್ಬರ ಬಂಧನ
ಶಿವಮೊಗ್ಗ: ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಂಗೋಟೆ ಗ್ರಾಮದಲ್ಲಿ ಹಾಸನದ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನದ ನಾಣ್ಯ ಕೊಟ್ಟು 7 ಲಕ್ಷ ರೂ. ವಂಚಿಸಿದ ಪ್ರಕರಣ 24 ಗಂಟೆಯ ಒಳಗಾಗಿ ಇತ್ಯರ್ಥ ಕಂಡಿದೆ.
ಪ್ರಕರಣದಲ್ಲಿ ಚನ್ನಗಿರಿ ತಾಲ್ಲೂಕಿನ ಚಿಕ್ಕಬ್ಬಿಕೆರೆ ಗ್ರಾಮದ ಸುನೀಲ್ (34) ಹಾಗೂ ನಾಗಪ್ಪ (50) ಎಂಬವರನ್ನು ಹೊಳೆಹೊನ್ನೂರು ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ.
ಹಾಸನ ಅಮುಲ್ ಡೈರಿಯಲ್ಲಿ ಕೆಲಸ ಮಾಡ್ತಿದ್ದ ಗಿರಿಗೌಡ ಎಂಬ ವ್ಯಕ್ತಿಗೆ ಚನ್ನಗಿರಿ ತಾಲೂಕಿನ ಚಿಕ್ಕಬ್ಬಿಗೆರೆ ಗ್ರಾಮದ ಸುರೇಶ್ ಎಂಬ ಭದ್ರಾವತಿ ತಾಲೂಕಿನ ಮಂಗೋಟೆ ಗ್ರಾಮದಲ್ಲಿ ನಕಲಿ ಚಿನ್ನದ ನಾಣ್ಯ ನೀಡಿ ತಮ್ಮ ಬಳಿ ಇನ್ನಷ್ಟು ನಾಣ್ಯ ಇರುವುದಾಗಿ ಹೇಳಿದ್ದರು. ಅದನ್ನು ನಂಬಿ ಗಿರಿಗೌಡರು ಏಳು ಲಕ್ಷ ರೂಪಾಯಿ ನೀಡಿದ್ದರು. ಅವರಿಗೆ ಆರೋಪಿಗಳು ನಕಲಿ ನಾಣ್ಯ ಕೊಟ್ಟು ವಂಚಿಸಿದ್ದರು. ಈ ಸಂಬಂಧ ಕಳೆದ 23ರಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿತ್ತು.
ಸಿಪಿಐ ಲಕ್ಷ್ಮಿಪತಿ, ಪಿಎಸ್‌ಐಗಳಾದ ರಮೇಶ್, ಮಂಜುನಾಥ್ ಎಸ್ ಕುರಿ, ಕೃಷ್ಣನಾಯ್ಕ್, ಸಿಬ್ಬಂದಿ ವಿಶ್ವನಾಥ್, ಅಣ್ಣಪ್ಪ, ಪ್ರಕಾಶ್, ಕುಬೇರ, ಪ್ರಶಾಂತ್ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.