ಮೈಕ್ರೋ ಫೈನಾನ್ಸ್ ನವರು ಮನೆ ಬಾಗಿಲಿಗೆ ಬಂದು ಕಿರಿಕಿರಿ ಮಾಡಿದರೆ ತಕ್ಷಣ ಈ ನಂಬರ್ ಗೆ ಕರೆ ಮಾಡಿ
ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕುವು ಸಲುವಾಗಿಯೇ ಕಾನೂನು ಜಾರಿ ಮಾಡಿದೆ. ಆದಾಗ್ಯು ಕೊಟ್ಟ ದುಡ್ಡು ವಾಪಸ್ ಕೊಡುವಾಗ, ಇಸ್ಕೊಂಡಾಗ ಇದ್ದ ನಿಯತ್ತು ಇರಬೇಕಲ್ವಾ ಎನ್ನುತ್ತಲೇ ಸಾಲಗಾರರು ಮತ್ತಷ್ಟು ಕಿರುಕುಳ ನೀಡುತ್ತಿರುವ ಬಗ್ಗೆ ವರದಿಗಳು ಕೇಳಿಬಂದಿದೆ. ಶಿವಮೊಗ್ಗದಲ್ಲಿಯು ಇಂತಹ ಸಾಲದ ಕಿರುಕುಳ ಸಾಮಾನ್ಯವಾಗಿದೆ.
ಹಣ ಪಡೆದವರು ಸ್ವಲ್ಪ ವೀಕ್ ಎಂದು ಗೊತ್ತಾಗುತ್ತಲೇ ಬಾಯಿಗೆ ಬಂದ ಹಾಗೆ ಬೈದು ಹೆದರಿಸುವ ಪ್ರವೃತ್ತಿಗಳು ಚಾಲ್ತಿಯಲ್ಲಿದೆ. ಜೊತೆಯಲ್ಲಿ ರೌಡಿಶೀಟರ್‌ಗಳನ್ನು ಮನೆಯ ಬಳಿ ಕಳುಹಿಸಿ ಹಣದ ರಿಕವರಿ ಮಾಡಿಕೊಳ್ಳಲಾಗುತ್ತಿದೆ ಎಂದ ಸುದ್ದಿಯಿದೆ. ಇದೆಲ್ಲದಕ್ಕೂ ಬ್ರೇಕ್ ಹಾಕುವ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸೂಚನೆಯಂತೆ ಸಾಲಗಾರರ ಕಾಟಕ್ಕೆ ಬ್ರೇಕ್ ಹಾಕಲು 112 ERSS ನ ಮೊರೆ ಹೋಗುವಂತೆ ಸಾರ್ವಜನಿಕರಿಗೆ ತಿಳಿಸಿದೆ.
ಹೌದು, ಸಾಲದ ವಿಚಾರವಾಗಿ ಕಿರುಕುಳ ನೀಡಿದ್ದಲ್ಲಿ ತಕ್ಷಣವೇ 112 ಪೊಲೀಸರಿಗೆ ಕರೆ ಮಾಡುವಂತೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಈ ಪ್ರಕಟಣೆಯನ್ನು ಎಸ್‌ಪಿ ಮಿಥುನ್ ಕುಮಾರ್, ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಸಾಲ ಪಡೆದವರು, ಸಾಲದಾತರ ಆರ್ಭಟಕ್ಕೆ ಹೆದರುವ ಅಗತ್ಯವಿಲ್ಲ. ಸಾಲ ಕೊಟ್ಟವರು ಸಲ್ಲದ ಮಾತುಗಳನ್ನು ಆಡಿ ಹೆದರಿಸಿದರೆ, ತಕ್ಷಣವೆ ಪೊಲೀಸರ ಮೊರೆಹೋಗಬಹುದಾಗಿದೆ.