ರಸ್ತೆ ಅಪಘಾತ : ಓರ್ವ ಸಾವು ,ಇನ್ನೋರ್ವ ಗಂಭೀರ – ರಸ್ತೆ ಅವ್ಯವಸ್ಥೆ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ
ಹೊಳೆಹೊನ್ನೂರು ಜಂಕ್ಷನ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಟಿವಿಎಸ್ ಎಕ್ಸ ಎಲ್ ಸವಾರ ಮೃತಪಟ್ಟು ಹಿಂಬದಿ ಕುಳಿತಿದ್ದ ಮಹಿಳೆಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ನಡೆದಿದೆ.ಈ ಅಪಘಾತಕ್ಕೆ ಅವೈಜ್ಞಾನಿಕ ರಸ್ತೆಯೇ ಕಾರಣ ಎಂದು ಆರೋಪಿಸಿ ಸ್ಥಳದಲ್ಲಿ ನೆರೆದ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಪುಟ್ಟಪ್ಪ ಎಂಬ ವ್ಯಕ್ತಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಹೊಳೆಹೊನ್ನೂರಿನಿಂದ ಶಿವಮೊಗ್ಗಕ್ಕೆ ತೆರಳುವ ನೂತನ ರಸ್ತೆಯಲ್ಲಿ ಅಶೋಕ್ ಲೈಲ್ಯಾಂಡ್ ನ ಗೂಡ್ಸ್ ವಾಹನ ಮತ್ತು ಎಕ್ಸ್ ಎಲ್ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಹೊಳೆಹೊನ್ನೂರಿನಿಂದ ಬೈಪಾಸ್ ಜಂಕ್ಷನ್ ಬಳಿ ಸೇರುವ ಜಾಗದಲ್ಲಿ ಟಾಟಾ ಏಸ್ ಬಂದು ಗುದ್ದಿದೆ. ಪುಟ್ಟಪ್ಪ ತಮ್ಮ ಅತ್ತಿಗೆಯನ್ನ ಕೂರಿಸಿಕೊಂಡು ಬೈಕ್ ನಲ್ಲಿ ಸಾಗುವಾಗ ಈ ಘಟನೆ ಸಂಭವಿಸಿದೆ.
ಘಟನೆಯನ್ನ ಖಂಡಿಸಿ ಹಾಗೂ ಜಂಕ್ಷನ್ ರಸ್ತೆಯ ಕಾಮಗಾರಿಯನ್ನ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸುತಿದ್ದಾರೆ.ಪ್