January 11, 2026

ಎಟಿಎಮ್ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

ಎಟಿಎಮ್ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು

ಶಿವಮೊಗ್ಗ | ಕಳ್ಳನೋರ್ವ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿದ ಘಟನೆ ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಸಮೀಪದಲ್ಲಿರುವ ಬ್ಯಾಂಕ್ ಒಂದರ ಎಟಿಎಂನಲ್ಲಿ ಕಳವು ಯತ್ನ ನಡೆದಿದೆ.

ಎಟಿಎಂ ಬಾಕ್ಸ್ ಒಡೆಯಲು ಕಳ್ಳ ಯತ್ನಿಸಿದ್ದಾನೆ. ಎಟಿಎಂನಲ್ಲಿ ಸೈರನ್ ಶಬ್ದ ಹಾಗೂ 112 ಸಿಬ್ಬಂದಿಯನ್ನು ನೋಡಿ ಕಳ್ಳ ಪರಾರಿಯಾಗಿದ್ದಾನೆ.

ಈ ಸಂಬಂಧ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಕಲಂ 331(4) ಮತ್ತು 62 BNS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿ ಬಿಹಾರ ರಾಜ್ಯದ ಸಾರಸ್ ಜಿಲ್ಲೆಯ ಸಮಾನಿ ತಾಲೂಕಿನ ಜಲೈ ಗ್ರಾಮದ ಕಾಂಕ್ರೀಟ್ ಕೆಲಸಗಾರ ಮಹಮ್ಮದ್ ವಸೀಂ ಬಿನ್ ಅಲೀ ಹಸನ್ (22) ಈತನನ್ನು ಬಂಧಿಸಲಾಗಿದೆ.

ಈ ಕಾರ್ಯಾಚರಣೆಗೆ ಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ್ ಭಾಗೋಜಿ, ಎಎಸ್ಐ ಹರ್ಷ ಎಎಸ್ಐ ಮತ್ತು ಸಿಬ್ಬಂದಿಗಳಾದ ಸಿಪಿಸಿ ಕಿಶೋರ್, ಆಂಜಿನಪ್ಪ, ಕಾಂತರಾಜ್ ಮತ್ತು ಪ್ರಕಾಶ್ ಹಾಗೂ ಇಲಾಖಾ ವಾಹನದ ಚಾಲಕ ಸೋಮು ಎಪಿಸಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

About The Author

Leave a Reply

Your email address will not be published. Required fields are marked *