
ದಾರಿಹೋಕನನ್ನು ವಂಚಿಸಿ ಉಂಗುರ ದೋಚಿದ ಬೈಕ್ ಸವಾರರು
ದಾರಿಹೋಕನನ್ನು ವಂಚಿಸಿ ಉಂಗುರ ದೋಚಿದ ಬೈಕ್ ಸವಾರರು ಶಿವಮೊಗ್ಗ: ದಾರಿಯಲ್ಲಿ ಸಿಗುವ ವ್ಯಕ್ತಿಗಳು ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಹೇಗೆಲ್ಲಾ ಯಾಮಾರಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಎನ್ನುವಂತಹ ಪ್ರಕರಣವೊಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ವೀರಶೈವ ರುದ್ರಭೂಮಿಯ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮಾತನಾಡಿಸಿದ್ದಾರೆ. ಕರುಬರಪಾಳ್ಯದ ದುರ್ಗಮ್ಮನ ದೇವಸ್ಥಾನದ ಹುಂಡಿಗೆ ಹಣ ಹಾಕಬೇಕು. ಆದರೆ ದೇವಸ್ಥಾನದ ಬಾಗಿಲು ಹಾಕಿದೆ. ಆ ದುಡ್ಡನ್ನ ನಿಮಗೆ ಕೊಡುತ್ತೇವೆ. ಸಂಜೆ ನೀವೆ ಹಾಕಬಹುದಾ ಎಂದು ಕೇಳಿದ್ದಾರೆ….